ಶಹಾಬಾದ:ರೈತರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯಲ್ಲಿ ಉನ್ನತಿ ಸಾಧಿಸಬೇಕೆಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಕಾಶಿನಾಥ ದಂಡೋತಿ ಹೇಳಿದರು.
ಅವರು ಗುರುವಾರ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾದ ರೈತರಿಗೆ ತಾಡಪತ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ಸರಕಾರದಿಂದ ಸಿಗುವ ತಾಡಪತ್ರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ವಿತರಣೆ ಮಾಡಲಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು.ಅಲ್ಲದೇತಾಡಪತ್ರಿಗಳನ್ನು ರಾಶಿ ಸಮಯದಲ್ಲಿ ಬಹಳಷ್ಟು ಉಪಯೋಗವಾಗಲಿದೆ.ತಾಡಪತ್ರಿಯನ್ನು ಆದಷ್ಟು ಬಿಸಿಲಿನಲ್ಲಿ ಇಡಬೇಡಿ.ಅದನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.ಅಲ್ಲದೇ ರೈತರಿಗೆ ಕೃಷಿಗೆ ಸಂಬಂಧಿಸಿದ, ಕೀಟಗಳ ಹಾವಳಿಯನ್ನು ತಪ್ಪಿಸಲು ಕೈಗೊಳ್ಳಬೇಕಾದ ಸಲಹೆ, ಸೂಚನೆಗಳನ್ನು ನಮ್ಮ ಇಲಾಖೆಯಿಂದ ಪಡೆದುಕೊಂಡು ಪ್ರತಿಪರ ರೈತರಾಗಿ ಹೊರಹೊಮ್ಮಬೇಕೆಂದು ಹೇಳಿದರು.
ಮುಖಂಡರಾದ ಶೇರ ಅಲಿ,ಸುರೇಶ ಚವ್ಹಾಣ, ಸಹಾಯಕ ಕೃಷಿ ಅಧಿಕಾರಿ ಶಶಿಕಾಂತ ಭರಣಿ ಮತ್ತು ರವೀಂದ್ರಕುಮಾರ, ಹಣಮಂತರಾಯ ಪ್ಯಾರಸಾಬಾದಿ ಸೇರಿದಂತೆ ಹೋಬಳಿಯ ಅನೇಕ ರೈತರು ಹಾಜರಿದ್ದರು.