ಹಾಸನ; ಹೇಮಾವತಿ ಜಲಾನಯನ ಪ್ರದೇಶಗಳ ಕೆರೆ-ಕಟ್ಟೆಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನೀರನ್ನು ಹರಿಬಿಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬೆಳಗ್ಗೆ ಭೇಟಿ ನೀಡಿದ ಸಚಿವರು ಜಲಾಶಯದ ಇಂಜಿನಿಯರ್ ಗಳೊಂದಿಗೆ ಮಾತನಾಡಿದರು. ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ನೀರನ್ನು ಹರಿಬಿಡಲು ತಿಳಿಸಿದರು.
ಹೇಮಾವತಿ ಜಲಾಶಯಕ್ಕೆ ಒಳಪಡುವ ಜಿಲ್ಲೆಗಳಾದ ತುಮಕೂರು ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ಕೆರೆಕಟ್ಟೆಗಳ ನೀರು ತುಂಬಿಸಲು ನಾಲೆಗಳಿಗೆ ನೀರನ್ನು ಬಿಡುವಂತೆ ಸೂಚನೆ ನೀಡಿದರು .
ಹೇಮಾವತಿ ಜಲಾಶಯಕ್ಕೆ ಈಗಾಗಲೇ ೫೦ ಸಾವಿರ ಕ್ಯೂಸೆಕ್ಸ್ ನೀರು ಒಳಹರಿವಿದ್ದು ೨೦ ಸಾವಿರ ಕ್ಯೂಸೆಕ್ಸ್ ನೀರು ನಾಲೆ ಹಾಗೂ ನದಿಗೆ ಹರಿಬಿಡಲಾಗುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಈ ವೇಳೆ ಅರಕಲಗೂಡು ಶಾಸಕರಾದ ರಾಮಸ್ವಾಮಿ ಹಾಗೂ ಜಲಾಶಯದ ಅಧಿಕಾರಿಗಳು ಉಪಸ್ಥಿತರಿದ್ದರು.