ಕಲಬುರಗಿ: ನಗರದ ಗಾಜಿಪುರ ಬಡವಾಣೆಯ 38 ವರ್ಷದ ವ್ಯಕ್ತಿ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಗಾಜಿಪುರ ನಿವಾಸಿಯಾಗಿರುವ ಸುನಿಲ್ ರೈಕೋಡ್, (38), ಆತ್ಮಹತ್ಯೆಗೆ ಶರಣಾದ ವ್ಯಕ್ತಿ, ಗಾಜಿಪುರ ಬಡಾವಣೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಇವರು, ಮಾನಸಿಕ ಒತ್ತಡದಿಂದ ನೇಣು ಬಿಗಿದ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ವ್ಯಕ್ತವಾಗುತ್ತಿದೆ.
ಸುನಿಲ್ ಕರಾಟೆ ಚ್ಯಂಪಿಯನ್ ವಿಥ್ ಬ್ಲಾಕ್ ಬೆಲ್ಟ್ ಆಗಿದರು ಎಂದು ತಿಳಿದುಬಂದಿದ್ದು, ಚಪ್ಪಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಭೇಟ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.