ಕಲ್ಯಾಣ ನಾಡಿನ ಮಹಾದಾಸೋಹಿ ಶ್ರೀ ಶರಣಬಸವೇಶ್ವರು

0
71

ಶರಣಬಸವೇಶ್ವರರು (೧೭೪೬ -೧೮೨೨) ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿಜನಿಸಿದರು. ತಂದೆ ಮಲಕಪ್ಪಾ ಹಾಗೂತಾಯಿ ಸಂಗಮ್ಮನವರು.ವಿಶ್ವಗುರು ಬಸವೇಶ್ವರರಿಂದ ಸ್ಥಾಪಿತವಾದನಮ್ಮ ಲಿಂಗಾಯತ ಧರ್ಮದ ಸಂದೇಶಗಳನ್ನು ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು, ನೆಲೆ ನಿಂತು, ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಅನೇಕ ಪವಾಡಗಳನ್ನು ಹಾಗೂ ತ್ರಿವಿಧ ದಾಸೋಹ  ಸೇವೆಗೈದು  ದಿನಾಂಕ 11-03-1822, ಸೋಮವಾರದಂದು ಲಿಂಗೈಕ್ಯರಾದರು.ಬಳಿಕ ಅವರ ದಿವ್ಯಸಮಾಧಿಯ ಮೇಲೆ ಗೋಪುರವನ್ನು ಕಟ್ಟಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ “ಶ್ರೀ ಶರಣಬಸವೇಶ್ವರ ದೇವಸ್ಥಾನ “. ಭಕ್ತರ ಮನದಲ್ಲಿ ಅವರ ನೆನಪು ಎಂದೆಂದಿಗೂ ಮಾಸದಂತೆ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಎಂದರೆ,ಪ್ರತಿ ವರ್ಷ ಹೋಳಿ ಹುಣ್ಣಿಮೆ ಆಗಿ ಐದನೆಯ ದಿನದಂದು ಜಾತ್ರೆ ಹಾಗೂ ರಥೋತ್ಸವವನ್ನು ಅವರ ಅಪಾರ ಭಕ್ತರ ಸಮ್ಮುಖದಲ್ಲಿ ಕಲಬುರಗಿಯಲ್ಲಿ ಹಾಗೂ ಅವರು ಜನಿಸಿದ ಅರಳಗುಂಡಗಿ ಹಳ್ಳಿಯಲ್ಲಿಯೂ ಅತ್ಯಂತ ಅದ್ದೂರಿಯಾಗಿ  ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ.

ಶರಣಬಸವೇಶ್ವರರು ತಮ್ಮ ಬದುಕಿನುದ್ದಕ್ಕೂ ಕಾಯಕಮತ್ತು ದಾಸೋಹ ಸಿದ್ಧಾಂತವನ್ನು ಪ್ರತಿಪಾದಿಸಿ ನುಡಿದಂತೆಯೇ ನಡೆದರು. ಅವರು ಜ್ಞಾನದ ಬೃಹತ್ ಭಂಡಾರವೇ ಆಗಿದ್ದರು. ಪರಿಶುದ್ಧ ಹಾಗೂ ನಿಸ್ವಾರ್ಥ ಜೀವನವನ್ನು ನಡೆಸಲು ಬೇಕಾದ ಎಲ್ಲ ಗುಣಗಳಿಂದ ಭರಿತರಾಗಿದ್ದ ಶರಣಬಸವೇಶ್ವರರು ಹಸಿವಿನಿಂದ ಬಂದವರಿಗೆ ಅನ್ನ ದಾಸೋಹ ಮಾಡಿದರು. ಮಕ್ಕಳಿಲ್ಲದ ದಂಪತಿ ಮಡಿಲಿಗೆ ಸಂತಾನ ಭಾಗ್ಯ ಕರುಣಿಸಿದರು. ದುಷ್ಟ, ದುರುಳರ ಮನಃಪರಿವರ್ತನೆ ಮಾಡಿ, ಅವರನ್ನು ಸರಿದಾರಿಯಲ್ಲಿ ನಡೆಸುವ ದೀವಿಗೆಯಾದರು. ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗಳ ರೋಗಗಳನ್ನು ನಿವಾರಣೆ ಮಾಡಿದರು. ನಮ್ಮ ಲಿಂಗಾಯತ ತತ್ವಗಳನ್ನು ಅನುಸರಿಸಿ ಬದುಕಲು ಬಯಸಿ ಬಂದವರಿಗೆ ‘ಲಿಂಗ ದೀಕ್ಷೆ’ ಯನ್ನು ನೀಡಿದರು. ಈ ಎಲ್ಲ ಮಹಾನ್ ಕಾರ್ಯಗಳಲ್ಲಿ ಶ್ರೀ ಶರಣಬಸವೇಶ್ವರರ ಜೊತೆಯಾಗಿ ನಿಂತವರು ನಮ್ಮಕಲ್ಬುರ್ಗಿಯ ಅವರ ನೆಚ್ಚಿನ ಶಿಷ್ಯ ದೊಡ್ಡಪ್ಪ ಶರಣರು. ಹಾಗಾಗಿ, ಶರಣಬಸವೇಶ್ವರರ ಸಮಾಧಿ ಇರುವ ಗರ್ಭ ಗುಡಿಯಲ್ಲಿ, ಗದ್ದುಗೆಯ ಮೇಲೆ  ಶ್ರೀ ಶರಣಬಸವೇಶ್ವರರ ಹಾಗೂ ಅವರ ನೆಚ್ಚಿನ ಶಿಷ್ಯಆದಿ ದೊಡ್ಡಪ್ಪ ಶರಣರ ಎಂದರೆ,ಗುರು-ಶಿಷ್ಯಅವಿನಾಭಾವ ಸಂಬಂಧ ಹಾಗೂ ಸಾಮರಸ್ಯ ಸಾರುವ ಹಾಗೂ ಶಿಷ್ಯರು ಗುರುವಿನ ಪ್ರತಿಬಿಂಬವಾಗಿರಬೇಕೆಂದು  ಸೂಚಿಸುವ ಬೆಳ್ಳಿಮುಖಗಳನ್ನುಳ್ಳ ‘ಜೋಡಿ ಮೂರ್ತಿ’ ಯನ್ನು, ಅಂದರೆ ‘ಅವಳಿ ದಿವ್ಯಬಿಂಬ’ ಗಳಿರುವ ವಿಗ್ರಹವನ್ನು ಪ್ರಾತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು,‌ ಇದೇ ಭಕ್ತರ ಆರಾಧನಾ ಬಿಂದುವಾಗಿದೆ.

Contact Your\'s Advertisement; 9902492681

ಶರಣಬಸವೇಶ್ವರರು ಹುಟ್ಟಿದ ಗ್ರಾಮ  ಅರಳಗುಂಡಗಿಯಲ್ಲಿ ದೇವಸ್ಥಾನವನ್ನೊಳಗೊಂಡಂತೆ ನಮ್ಮ ಹಾಗೂ ಹೊರದೇಶಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಶ್ರೀಶರಣಬಸವೇಶ್ವರರ ದೇವಾಲಯಗಳಿವೆ. ಈಬಗ್ಗೆ ಸಾಕಷ್ಟುಸಂಶೋಧನೆಗಳೂಕೂಡಆಗಿವೆಎಂದುಬಲ್ಲಮೂಲಗಳಿಂದತಿಳಿದುಬಂದಿದೆ!!೨೪.೦೪.೧೯೨೭ರಂದುಮಹಾತ್ಮಗಾಂಧೀಜಿಯವರು ನಮ್ಮಕಲಬುರಗಿಯ ಶರಣಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದು ಅಭಿಮಾನದ ಸಂಗತಿ!ಶರಣಬಸವೇಶ್ವರ ದೇವಸ್ಥಾನಕ್ಕೆ ಕರುನಾಡು ಹಾಗೂ ಹೊರನಾಡುಗಳಿಂದಲೂ  ವರ್ಷವಿಡೀ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಿಶೇಷವಾಗಿ ಶ್ರಾವಣ ತಿಂಗಳು ಪೂರ್ತಿ ಹಾಗೂ ಮೂರನೇಯ ಸೋಮವಾರದಂದು ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಜರುಗುವುದರಿಂದ ಆವತ್ತು ಸಾವಿರಾರು ಭಕ್ತರು ಬಂದು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಶ್ರೀ ಶರಣ ಬಸವೇಶ್ವರರ ದರ್ಶನ ಪಡೆಯುತ್ತಾರೆ.ಅದೆಷ್ಟೋ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಕಲಬುರಗಿಯ ಶರಣರ ದರ್ಶನ ಪಡೆಯುತ್ತಿರುವುದನ್ನೂ ನಾವು ನೋಡುತ್ತೇವೆ.

ಅಂದು ಶರಣಬಸವೇಶ್ವರರ ದಾಸೋಹದಲ್ಲಿ ಪ್ರತಿನಿತ್ಯವೂ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದರು. ಈ ದಾಸೋಹ ಪರಂಪರೆ ಇಂದಿಗೂ ಈ ದೇವಸ್ಥಾನದಲ್ಲಿ  ಅವ್ಯಾಹತವಾಗಿ ಮುಂದುವರೆದಿದೆ.ನಮ್ಮ ಶರಣಬಸವೇಶ್ವರ ಮಹಾದಾಸೋಹ ಪೀಠ ಇಂದು ಜ್ಞಾನದಾಸೋಹ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡು ದೇಶ-ವಿದೇಶಗಳಲ್ಲಿಯೂ ಅತ್ಯಂತ ಹೆಸರುವಾಸಿಯಾಗಿದೆ.

ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ, ಕಲ್ಯಾಣ ಕರ್ನಾಟಕದಲ್ಲಿ ಕಾಯಕ,ದಾಸೋಹ ತತ್ವ ಸಾರಿ, ಭಕ್ತರು ಏಳಿಗೆಯಲ್ಲಿಯೇ ಕೈಲಾಸವನ್ನು ಕಂಡ ನಮ್ಮ“ಕಲ್ಯಾಣನಾಡಿನದಿವ್ಯಜ್ಯೋತಿ”  ಶ್ರೀ ಶರಣಬಸವೇಶ್ವರರು ತಮ್ಮ ಸಮಸ್ತ ಭಕ್ತರ ಮನದಲ್ಲಿ ಅಮರರಾಗಿ ಉಳಿದಿದ್ದಾರೆ.ನಮ್ಮ ಕಲಬುರಗಿಯ ಮಹಾದಾಸೋಹಿಯ ದರ್ಶನ ಭಾಗ್ಯವನ್ನು ಪ್ರತಿಯೊಬ್ಬ ಶಿವಶರಣರೂ ತಮ್ಮ ಬದುಕಿನ ಅವಧಿಯಲ್ಲಿ ಒಮ್ಮೆಯಾದರೂ ಪಡೆದುಕೊಂಡು ಧನ್ಯರಾಗಲಿ ಹಾಗೂ ಇಂಥ ಶ್ರೇಷ್ಠ ಮಹಾನುಭಾವರು ಹಾಕಿಕೊಟ್ಟ ದಿವ್ಯ ಮಾರ್ಗದಲ್ಲಿ ನಡೆಯುತ್ತ ನಾವೆಲ್ಲರೂ ನಮ್ಮ ಜೀವನಪಾವನ ಮಾಡಿಕೊಂಡು, ಉನ್ನತಿ ಹೊಂದೋಣ !! ಎಂಬ ಸದಾಶಯಗಳೊಂದಿಗೆ ಮುಗಿಸುವ ಮುನ್ನ ಈ ಕೆಳಗಿನ ಯೂಟ್ಯೂಬ್ ಲಿಂಕ್ ಒತ್ತಿ  “ ಶ್ರೀ ಶರಣಬಸವೇಶ್ವರರ ಜೀವನ ಚರಿತ್ರೆ ಭಾಗ ೧” ವೀಕ್ಷಿಸಿ ಎಂದು ಕೋರಿಕೊಳ್ಳುತ್ತಿದ್ದೇನೆ 🙏

https://youtu.be/_a5bOBVMvsE

ಡಾ.ಗೀತಾಪಾಟೀಲ, ಪ್ರೊಫೆಸರ್,

ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ ಕಲಬುರಗಿ,

೧೦೦೮೨೦೨೦.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here