ಕಲಬುರಗಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್.ಪಿ.ಪಿ.ಸಿ.ಡಿ. ಮತ್ತು ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಆಡಿಯೋಲಾಜಿಸ್ಟ್-01 ಹಾಗೂ ಆಡಿಯೋಮೆಟ್ರಿಕ್ ಅಸಿಸ್ಟಂಟ್-01 ಹುದ್ದೆಗಳನ್ನು ಮೆರಿಟ್-ಕಂ-ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಉಪಾಧ್ಯಕ್ಷರು ತಿಳಿಸಿದ್ದಾರೆ.
ಆಡಿಯೋಲಾಜಿಸ್ಟ್ 01 ಹುದ್ದೆಗೆ ಆರ್.ಸಿ.ಐ. (RCI) ಪ್ರಮಾಣೀಕೃತ ಸಂಸ್ಥೆಯಿಂದ ಆಡಿಯೊಲಾಜಿ ಮತ್ತು ಸ್ಪೀಚ್ ಲಾಂಗ್ವೇಜ್ ಪ್ಯಾಥೊಲಾಜಿಯಲ್ಲಿ ಪದವಿ (BSc in Speech & Hearing)ಪಾಸಾಗಿರಬೇಕು. ಮಾಸಿಕ 30,000 ರೂ.ಗಳ ಸಂಭಾವನೆ ನೀಡಲಾಗುತ್ತದೆ. ಆಡಿಯೋಮೆಟ್ರಿಕ್ ಅಸಿಸ್ಟಂಟ್ ಹುದ್ದೆಗೆ ಆರ್.ಸಿ.ಐ. (RCI) ಪ್ರಮಾಣಿಕೃತ ಸಂಸ್ಥೆಯಿಂದ 1 ವರ್ಷದ ಡಿಪ್ಲೋಮಾ ಇನ್ ಹಿಯರಿಂಗ್ ಆ್ಯಂಡ್ ಸ್ಪೀಚ್ (DHLS) ಪಾಸಾಗಿರಬೇಕು. ಮಾಸಿಕ 15,000 ರೂ.ಗಳ ಸಂಭಾವನೆ ನೀಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಕುಟುಂಬ ಕಲ್ಯಾಣ ವಿಭಾಗದ ಕೋಣೆಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ಪೂರಕ ಮೂಲ ದಾಖಲೆಗಳೊಂದಿಗೆ ಬಯೊಡಾಟಾದೊಂದಿಗೆ (ವಿದ್ಯಾರ್ಹತೆ ಅಂಕಪಟ್ಟಿಯ ದೃಢೀಕೃತ ಪ್ರತಿ, ಅನುಭವ ಪ್ರಮಾಣಪತ್ರ, ಗ್ರಾಮೀಣ ಕನ್ನಡ ಮಾಧ್ಯಮ, ಜಾತಿ ಪ್ರಮಾಣ ಪತ್ರ, 371(ಜೆ), ಯೊಜನಾ ನಿರಾಶ್ರಿತರು, ಅಂಗವಿಕಲ ಮೂಲ ಪ್ರಮಾಣಪತ್ರ, ಆರ್‍ಸಿಐ, 1 ಸೆಟ್ ನಕಲು ಪ್ರತಿ ಹಾಗೂ ಭಾವಚಿತ್ರಗಳೊಂದಿಗೆ 2020ರ ಆಗಸ್ಟ್ 17ರವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 09449843394 ಗೆ ಸಂಪರ್ಕಿಸಲು ಕೋರಲಾಗಿದೆ.
ಒಂದು ವೇಳೆ ಮೇಲ್ಕಂಡ ಹುದ್ದೆಗಳು ಭರ್ತಿಯಾಗದೇ ಇದ್ದಲ್ಲಿ ಆ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಪ್ರತಿ ಶನಿವಾರ ವಾಕ್-ಇನ್ ಇಂಟರವ್ಯೂ (ದಿನಾಂಕ: 31-03-2021 ರ ವರೆಗೆ) ಮುಖಾಂತರ ಭರ್ತಿ ಮಾಡಿಕೊಳ್ಳಲಾಗುವುದು.