ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಭಾರತ ರಕ್ಷಿಸಿ ಆಂದೋಲನ

0
149

ಶಹಾಬಾದ: ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಮಂಗಳವಾರ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಭಾರತ ರಕ್ಷಿಸಿ ಆಂದೋಲನ ನಡೆಸಿದರು.

ಸಾರ್ವಜನಿಕ ಉದ್ದಿಮೆಗಳು ದೇಶದ ಆಸ್ತಿ.ಇವುಗಳನ್ನು ಮಾರುವುದು ದೇಶ ವಿರೋಧಿ.ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ದೇಶ ವಿರೋಧಿ.ಮೋದಿ ಹಠಾವೋ, ದೇಶ ಬಚಾವೋ. ಭೂ ಸುಧಾರಣಾ ಕಾಯ್ದೆಯನ್ನು ಒಪ್ಪುವುದಿಲ್ಲ.ರೈತ ಮತ್ತು ಕಾರ್ಮಿಕರ ಹೋರಾಟ ಚಿರಾಯುವಾಗಲಿ ಎಂದು ಘೋಷಣೆ ಕೂಗಿದರು.

Contact Your\'s Advertisement; 9902492681

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಹೊರಟಿದೆ.ಬ್ರಿಟಿಷರಿಂದ ಹೋರಾಟ ಮಾಡಿ ಪಡೆದಂತಹ ಕಾಯ್ದೆಗಳನ್ನು ನಮ್ಮನ್ನು ಆಳುತ್ತಿರುವ ಕೇಂದ್ರ ಸರಕಾರ ಕಳೆಯುತ್ತಿದೆ.ರೈತ, ಕಾರ್ಮಿಕರ ಹಾಗೂ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.ರೈತರನ್ನು, ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದ್ದಾರೆ.ಕಾರ್ಮಿಕರ ಹಕ್ಕುಗಳನ್ನು ಕೇಳಿದರೆ ದೇಶ ವಿರೋಧಿ ಪಟ್ಟ ಕಟ್ಟುತ್ತಿದ್ದು, ಇದನ್ನು ಎಲ್ಲರೂ ವಿರೋಧಿಸಬೇಕೆಂದು ಎಂದರು.

ಬಂಡವಾಳಶಾಹಿ ಪರವಾಗಿ ಮಾಡಿರುವ ಕಾಯ್ದೆ ತಿದ್ದುಪಡಿ, ರೇಲ್ವೆ, ವಿದ್ಯುತ್ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕರ ಕಾಯ್ದೆ, ಭೂಸುಧಾರಣಾ ಕಾಯ್ದೆ,ಎಪಿಎಂಸಿ ಕಾಯ್ದೆ, ಭೂ ಕಂದಾಯ ಕಾಯ್ದೆ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ, ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ರಾಯಪ್ಪ ಹುರಮುಂಜಿ,ಚಿತ್ರಶೇಖರ,ಅಕ್ಷರ ದಾಸೋಹದ ತಾಲೂಕಾ ಅಧ್ಯಕ್ಷೆ ಸಂಪತ್ತಕುಮಾರಿ, ಉಬೆದುಲ್ಲಾ, ರಾಘವೇಂದ್ರ.ಎಮ್.ಜಿ ಸೇರಿದಂತೆ ಎಐಯುಟಿಯುಸಿ, ಎಐಟಿಯುಸಿ, ಅಂಗನವಾಡಿಹಾಗೂ ಆರ್ಕೆಎಸ್ ಕಟ್ಟಡ ಕಾಮರ್ಿಕ ಸಂಘಟಕೆಗಳ ಕಾರ್ಯಕರತೆಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here