ಬೆಂಗಳೂರು: ಇಲ್ಲಿನ ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಮುಸ್ಲಿ ಯುವಕರ ತಂಡ ದೇವಸ್ಥಾನಕ್ಕೆ ರಕ್ಷಣೆಯಾಗಿ ನಿಂತು ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.
ಕಿಡಿಗೇಡಿಯೊಬ್ಬ ಮುಹಮ್ಮದ್ ಪೈಂಗಬರ್ ಅವರ ಕುರಿತು ಅವಹೇಳನಕಾರಿಯಾಗಿ ಫೋಸ್ಟ್ ಮಾಡಿದ್ದನ್ನು ಖಂಡಿಸಿ ಕೆಲವು ಪುಂಡರು ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯದಲ್ಲಿ ತೊಡಗಿರುವಾಗ, ಪ್ರಜ್ಞಾವಂತ ಯುವಕರ ತಂಡ ದೇವಸ್ಥಾನಕ್ಕೆ ರಕ್ಷಣೆ ಒದಗಿಸುವ ಮೂಲಕ ಸೌಹಾರ್ದತೆಯ ದೀಪ ಹಚ್ಚಿದ್ದಾರೆ.