ಸ್ವಾತಂತ್ರೋತ್ಸವದ ದಿನ ವಿದ್ಯಾರ್ಥಿಗಳ ಪ್ರತಿಜ್ಞೆ

0
63

ವಾಡಿ: ಸ್ವಾತಂತ್ರೋತ್ಸವದ ದಿನವಾದ ಆ.೧೫ ರಂದು ರಾಜ್ಯದಾಧ್ಯಂತ ವಿದ್ಯಾರ್ಥಿಗಳು, ಕ್ರಾಂತಿಕಾರಿಗಳ ಕನಸು ಸಾಕಾರಗೊಳಿಸಲು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ತಿಳಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಹುತಾತ್ಮರಾದ ನೇತಾಜಿ ಸುಭಾಶಚಂದ್ರ ಬೋಸ್, ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ಖುದಿರಾಂ ಬೋಸ್, ಅಶ್ಫಾಖುಲ್ಲಾ ಖಾನ್‌ರಂತಹ ಮಹಾನ್ ಕ್ರಾಂತಿಕಾರಿಗಳು ಕಂಡಿದ್ದ ಸ್ವಾತಂತ್ರೋತ್ತರದ ಭಾರತದ ಕನಸು ಇನ್ನೂ ಇಡೇರಿಲ್ಲ. ಶೋಷಣೆ, ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರ, ಕೋಮುವಾದ, ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳು, ಕೊಲೆ, ಸುಲಿಗೆಗಳು, ಮೌಢ್ಯ, ಕಂದಾಚಾರಗಳು ಇಂದಿಗೂ ಭಾರತೀಯರ ಬದುಕಿನ ಮೇಲೆ ಸವಾರಿ ಮಾಡುತ್ತಿವೆ.

Contact Your\'s Advertisement; 9902492681

ವೈಜ್ಞಾನಿಕ ಉನ್ನತ ಶಿಕ್ಷಣ, ಆರೋಗ್ಯ ಗಗನಕುಸುಮವಾಗಿದೆ. ಮಾನವನಿಂದ ಮಾನವನ ಶೋಷಣೆ ಮುಂದುವರೆದಿದೆ. ಜನರ ಬದುಕು ದುಸ್ಥಿತಿಗೆ ಸಿಲುಕಿದೆ. ಕ್ರಾಂತಿಕಾರಿಗಳು ಕಂಡ ಕನಸು ನನಸು ಮಾಡಲು ಮತ್ತೊಂದು ಭಾರತ ಕ್ರಾಂತಿಗೆ ನಾವುಗಳು ಸಜ್ಜಾಗಬೇಕಿದೆ ಎಂದು ವಿವರಿಸಿರುವ ಗೌತಮ ಪರತೂರಕರ, ಆ.೧೫ರಂದು ನಡೆಯಲಿರುವ ಪ್ರತಿಜ್ಞಾವಿಧಿ ಸ್ವೀಕಾರ ಆಳುವ ಸರಕಾರಗಳಿಗೆ ಎಚ್ಚರಿಕೆ ರವಾನಿಸಲಿದೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here