ಸ್ವಾತಂತ್ರ್ಯ ಸೇನಾನಿ ಸುರಪುರದ ನಾಲ್ವಡಿ ವೆಂಕಟಪ್ಪನಾಯ
ಸುರಪುರ ಸಂಸ್ಥಾನವು ಕ್ರಿ.ಶ. 1656 ರಲ್ಲಿ ಸ್ಥಾಪಿಸಲ್ಪಟ್ಟಿತ್ತು. ಇಲ್ಲಿ 13 ಜನ ನಾಯಕ ಅರಸರು ಆಳ್ವಿಕೆಯನ್ನು ಮಾಡಿದ್ದಾರೆ. ಅವರಲ್ಲಿ ಪ್ರಸಿದ್ಧ ಅರಸ ನಾಲ್ವಡಿ ವೆಂಕಟಪ್ಪನಾಯಕ. ಈತ ಕ್ರಿ.ಶ. 1843 ರಿಂದ 1858 ರವರೆಗೆ ಆಳ್ವಿಕೆ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಭಾರತದಲ್ಲಿ ಕ್ರಿ.ಶ. 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಗಾಳಿ ಜೋರಾಗಿ ಬೀಸುತ್ತಿತ್ತು. ಆಗ ದಕ್ಷಿಣ ಭಾರತದ ರಾಜರನ್ನೆಲ್ಲ ಒಗ್ಗೂಡಿಸಿ, ಬ್ರಿಟಿಷರನ್ನು ಕಾಲ್ತೆಗೆಸಬೇಕೆಂಬ ಮಹಾದಾಸೆಯನ್ನು ವೆಂಕಟಪ್ಪನಾಯಕ ಹೊಂದಿದ್ದನು. ಜಮಖಂಡಿ, ಆನೆಗೊಂದಿ, ನರಗುಂದ, ಹುನಗುಂದ, ಶಿರಹಟ್ಟಿ, ಅಕ್ಕಲಕೋಟೆ, ಕೊಲ್ಲಾಪುರ, ಬಳ್ಳಾರಿ, ಮೀರಜ್, ಜತ್ತು, ಮುಧೋಳ, ಧಾರವಾಡ, ಕಲಾದಗಿ, ರಾಯಚೂರು ಮುಂತಾದ ಭಾಗದ ಅರಸರು ವೆಂಕಟಪ್ಪ ನಾಯಕನನ್ನು ಹೋರಾಟದ ನೇತೃತ್ವವಹಿಸಿಕೊಳ್ಳಲು ಕೋರಿಕೊಂಡರು.
ಆಗ ವೆಂಕಟಪ್ಪ ನಾಯಕ ತನ್ನ ಅಧೀನದ ಸೈನಿಕರಿಗೆ ವ್ಯವಸ್ಥಿತವಾದ ತರಬೇತಿಯನ್ನು ನೀಡಿದನಲ್ಲದೇ, ತನ್ನ ಸೈನ್ಯಕ್ಕೆ ಶೂರ ಬೇಡರನ್ನು, ಅರಬ್‍ರನ್ನು, ರೋಹಿಲ್‍ರನ್ನು ಸೇರಿಸಿಕೊಂಡನು. ಅಂದು ಸುರಪುರ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರದ ತಾಣವಾಯಿತು. ಈ ಸಂಗತಿ ಅರಿತ ಬ್ರಿಟೀಷರು, ವೆಂಕಟಪ್ಪ ನಾಯಕನನ್ನು ಸದೆಬಡೆಯಲು ಆಲೋಚಿಸಿದರು. ಸುರಪುರವನ್ನು ಆಕ್ರಮಿಸಬೇಕೆಂಬ ತಂತ್ರಗಳನ್ನು ಹೂಡಲು ಪ್ರಯತ್ನಿಸÀತ್ತಿದರು. ಈತನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸÀತ್ತಿದರು. ಆದರೆ ತಕ್ಷಣವೇ ಅದು ಫಲಿಸಲಿಲ್ಲ.
ವೆಂಕಟಪ್ಪನಾಯಕನ ಅನೇಕ ಕಾರ್ಯತಂತ್ರಗಳನ್ನು ಗಮನಿಸಿದ ಬ್ರಿಟೀಷರು ಬೆಳಗಾವಿಯ 29ನೇ ನಂಬರಿನ ದಳದಲ್ಲಿ ಕ್ರಾಂತಿಯ ಕಿಡಿಯನ್ನು ಹಚ್ಚಿ ಸೈನ್ಯದಲ್ಲಿ ದಂಗೆಯನ್ನು ಎಬ್ಬಿಸಲು ವೆಂಕಟಪ್ಪನಾಯಕ ಮಹಿಪಾಲಸಿಂಗನೆಂಬ ಗೂಢಾಚಾರನನ್ನು ಕಳುಹಿಸಿದಾಗ, ಈತನನ್ನು ಗುರುತಿಸಿದ ಬ್ರಿಟೀಷರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ, ಇದಕ್ಕೆ ವೆಂಕಟಪ್ಪನಾಯಕನೇ ಕಾರಣವೆಂದು ಗೊತ್ತಾಯಿತು.
ಫೆಬ್ರುವರಿ, 7, 1858 ರಂದು ವೆಂಕಟಪ್ಪನಾಯಕನ ಮೇಲೆ ಯುದ್ಧ ಸಾರಿದರು. ಕ್ಯಾಪ್ಟನ್, ವಿಂಡ್‍ಹ್ಯಾಂ ಎಂಬ ಬ್ರಿಟೀಷ್ ಸೈನ್ಯದ ಕ್ಯಾಪ್ಟನ್ ಸುರಪುರದಿಂದ 5 ಕಿ.ಮೀ. ಅಂತರದಲ್ಲಿರುವ ರುಕ್ಮಾಪುರ ದಿಬ್ಬದ ಮೇಲೆ ಶಿಬಿರವನ್ನು ಹಾಕಿದನು. ನಂತರ ಹೆಚ್ಚಿನ ಪ್ರಮಾಣದ ಬ್ರಿಟೀಷ್ ಸೈನ್ಯ ಬಂದು ಅವರನ್ನು ಸೇರಿಕೊಂಡಿತು. ಸುರಪುರ ಸೈನ್ಯ ಬ್ರಿಟೀಷ್ ಸೈನ್ಯದ ಮೇಲೆ ದಾಳಿ ಮಾಡಿತು.
ಬ್ರಿಟೀಷ್ ಸೈನಿಕರನೇಕರು ಗಾಯಗೊಂಡರು. ಸುದ್ದಿ ಬ್ರಿಟೀಷ್ ಅಧಿಕಾರಿಗಳಿಗೆ ತಿಳಿಯಿತು. ಮರುದಿನವೇ ಬ್ರಿಟೀಷರ ಮೇಜರ್ ಹ್ಯಾಗ್ಸನ ನೇತೃತ್ವದ ಸೈನ್ಯ ವಿಂಡಹ್ಯಾಂನ ಸೈನ್ಯಕ್ಕೆ ಬಂದು ಸೇರಿಕೊಂಡಿತು. ಆಗ ಸೇನಾಪತಿ ಕ್ಯಾಪ್ಟನ್ ಜಾರ್ಜ್ ನ್ಯೂಬರಿ ಸುರಪುರದ ಮೇಲೆ ದಾಳಿ ಮಾಡಿದ. ಆದರೆ ವೆಂಕಟಪ್ಪ ನಾಯಕನ ಹೊಡೆತಕ್ಕೆ ಸಿಕ್ಕು ನೆಲಕ್ಕುರುಳಿದ. ಈತನ ಸಮಾಧಿಯು ರುಕ್ಮಾಪುರದ ಹತ್ತಿರ ಇದೆ.
ಆಗ ಬ್ರಿಟೀಷರು ಮದ್ರಾಸ್ ಹಾಗೂ ಲಿಂಗಸೂಗೂರುಗಳಲ್ಲಿ ಬೀಡುಬಿಟ್ಟಿದ್ದ ಸೈನ್ಯವನ್ನು ಕರೆಸಿಕೊಂಡು ಸುರಪುರದ ಮೇಲೆ ದಾಳಿ ಮಾಡಿದರು. ಸುರಪುರದ ಕೆಲ ಅತೃಪ್ತ ಅಧಿಕಾರಿಗಳು, ಬ್ರಿಟೀಷರ ಹಣದ ಆಸೆಗೆ ಬಲಿಯಾಗಿ, ವೆಂಕಟಪ್ಪನಾಯಕನಿಗೆ ಮೋಸ ಮಾಡಿದರು. ಗುಪ್ತಮಾರ್ಗಗಳ ಮಾಹಿತಿ ನೀಡಿದರು. ಸುರಪುರ ಸಂಪೂರ್ಣ ಬ್ರಿಟೀಷರ ವಶವಾಯಿತು.
ವೆಂಕಟಪ್ಪನಾಯಕ ಹೈದರಾಬಾದ್‍ಗೆ ತೆರಳಿದನು. ಸುರಪುರ ಸೈನ್ಯವನ್ನು ಇನ್ನಷ್ಟು ಸಂಘಟಿಸಬೇಕು, ಬ್ರಿಟೀಷರನ್ನು ಕಾಲ್ತೆಗೆಸಬೇಕೆಂಬ ಛಲದಿಂದ ಅರಬ್ ರೋಹಿಲಾರನ್ನು ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳುತ್ತಿದ್ದ, ಇದನ್ನು ಗಮನಿಸಿದ ಹೈದರಾಬಾದ್ ನಿಜಾಮನ ಮಂತ್ರಿ ಸಾಲಾರಜಂಗ್ ಹಾಗೂ ವನಪರ್ತಿಯ ಅರಸ ರಾಮೇಶ್ವರರಾವ್ ಕೂಡಲೇ ವೆಂಕಟಪ್ಪ ನಾಯಕನನ್ನು ಬಂಧಿಸಿ, ಬ್ರಿಟೀಷ್ ರೆಸಿಡೆಂಟನಿಗೆ ಒಪ್ಪಿಸಿದರು. ಈತನನ್ನು ಸಿಕಂದ್ರಾಬಾದ್ ಜೈಲಿನಲ್ಲಿಡಲಾಯಿತು.
ಆಗ ಮೆಡೋಸ್ ಟೇಲರ್‍ನು ಭೇಟಿಯಾದಾಗ ವೆಂಕಟಪ್ಪನಾಯಕನು ಆಡಿದ ಮಾತುಗಳು ಆತನ ಧೈರ್ಯೋತ್ಸಾಹಕ್ಕೆ ಹಿಡಿದ ಕನ್ನಡಿಯಂತಿವೆ. ಟೇಲರ್‍ನೇ ಹೇಳುವಂತೆ “ಒಂದು ವೇಳೆ ರಾಜನು ಅಪೇಕ್ಷೆಪಟ್ಟರೆ, ಸ್ವತಃ ರೆಸಿಡೆಂಟನು ಭೇಟಿಯಾಗಲು ಬರುವನು” ಎಂದು ತಿಳಿಸಿದಾಗ ವೆಂಕಟಪ್ಪನಾಯಕನು ಕೊಟ್ಟ ಉತ್ತರ “ನಾನು ನನ್ನ ಜೀವನವನ್ನುಳಿಸಲು ರೆಸಿಡೆಂಟನನ್ನು ಬೇಡಿಕೊಳ್ಳಬೇಕೆಂಬ ಅಪೇಕ್ಷೆ ಆತನಿಗಿದ್ದುದಾದರೆ, ಅದೆಂದಿಗೂ ಆಗದ ಮಾತು. ಬ್ರಿಟೀಷರು ನನ್ನನ್ನು ಉಳಿಸಿದ್ದರೆ ಅವರಿಗೆ ಋಣಿಯಾಗಿರುವೆ. ಆದರೆ ಜೀವವನ್ನುಳಿಸಲು ಅವರನ್ನು ಹೇಡಿಯಂತೆ ಬೇಡಿಕೊಳ್ಳಲಾರೆ ಮತ್ತು ನನ್ನವರೊಡನೆ ವಿಶ್ವಾಸಘಾತ ಮಾಡಲಾರೆ ಉಲ್ಥ್ಫಲಿñ್ದನ್ರೀ ನಾಲ್ವಡಿ ವೆಂಕಟಪ್ಪನಾಯಕ.
– ಡಾ. ಅಮರೇಶ ಯತಗಲ್
ಸಹ ಪ್ರಾಧ್ಯಾಪಕರು
ಶಾಸನಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ,