ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಗಳಿಸಿದ ಪ್ರಪಂಚದ ಏಕೈಕ ರಾಷ್ಟ್ರ ಭಾರತ- ನಾಗರಾಜ

0
157

ಶಹಾಬಾದ:ಅಹಿಂಸಾ ಮಾರ್ಗವೇ ಭಾವೈಕ್ಯತೆ ಮತ್ತು ಭಾತೃತ್ವಕ್ಕೆ ಪ್ರೇರಣೆ.ಶತಮಾನಗಳಿಂದ ದಾಸ್ಯದಿಂದ ಬಳಲಿದ ಭಾರತಕ್ಕೆ ಮಾಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ್ಯ ಗಳಿಸಿದ ಪ್ರಪಂಚದ ಏಕೈಕ ರಾಷ್ಟ್ರ ಭಾರತ ಎಂದು ನಗರದ ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಾಗರಾಜ.ವಿ ಹೇಳಿದರು.
ಅವರು ಶನಿವಾರ ನಗರದ ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ಇದು ದೇಶದ ಅತಿ ದೊಡ್ಡ ಹಬ್ಬ.ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯ ದೇಶದ ಜನ ಸಮುದಾಯ ಅಭಿವೃದ್ಧಿ, ಭಾವೈಕ್ಯತರ ಮತ್ತು ನೆಮ್ಮದಿ ಬದುಕಿಗೆ ಸಹಕಾರಿ.ಬಡತನ,ಅನಕ್ಷರತೆ ಮತ್ತು ಅಸಮಾನತೆಯಿಂದ ಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಎಂದ ಗಾಂಧೀಜಿಯವರ ಆಶಯದ ಬೆಳಕಿನಲ್ಲಿ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.


ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವಾವಿದ್ಯಾಲಯದ ಬಿ.ಕೆ.ರತ್ನಾ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ,ಅನೈತಿಕತೆಗಳು ತಾಂಡವವಾಡುತ್ತಿದ್ದು ಇದನ್ನು ತೊಲಗಿಸಿ ಮಾನವೀಯ ಗುಣಗಳನ್ನು ಬೆಳೆಸಬೇಕು.ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಸ್ವತಂತ್ರೋತ್ಸವವನ್ನು ಅರ್ಥಗರ್ಭಿತಗೊಳಿಸಬೇಕೆಂದು ಹೇಳಿದರು.
ನಗರದ ಗಣ್ಯರಾದ ಶಿವಕುಮಾರ ಇಂಗಿನಶೆಟ್ಟಿ, ಅನೀಲಕುಮಾರ ಇಂಗಿನಶೆಟ್ಟಿ, ರವಿಕುಮಾರ ಅಲ್ಲಂಶೆಟ್ಟಿ, ಬಸವಪ್ರಕಾಶ ಬೆಲ್ಲದ್,ಮಹ್ಮದ್ ಅಸ್ಲಾಂ,ಸಿಬ್ಬಂದಿಗಳು ಇತರರು ಇದ್ದರು.
ಡಿವಾಯ್ಎಸ್ಪಿ ಕಛೇರಿ: ಡಿವಾಯ್ಎಸ್ಪಿ ವೆಂಕನಗೌಡ ಪಾಟೀಲ ಧ್ವಜಾರೋಹಣ ಮಾಡಿದರು. ಸಿಬ್ಬಂದಿ ವರ್ಗದವರು ಇದ್ದರು.
ನಗರ ಪೊಲೀಸ್ ಠಾಣೆ : ಪಿಐ ಅಮರೇಶ.ಬಿ ಧ್ವಜಾರೋಹಣ ಮಾಡಿದರು. ಸಿಬ್ಬಂದಿ ವರ್ಗದವರು ಇದ್ದರು.
ಶಹಾಬಾದ ಪತ್ತಿನ ಸಹಕಾರ ಸಂಘ: ಧ್ವಜಾರೋಹಣ ಮಾಡಿದರು. ಡಾ.ಅಹ್ಮದ್ ಪಟೇಲ್, ಸದಾನಂದ ಕುಂಬಾರ, ಶರಣು ಜೋಗೂರ,ನಿಂಗಣ್ಣ ಸಂಗಾವಿಕರ್ ಇತರರು ಇದ್ದರು.
ಬಿಜೆಪಿ ಕಚೇರಿ: ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಧ್ವಜಾರೋಹಣ ಮಾಡಿದರು. ಬಸವರಾಜ ಬಿರಾದಾರ, ಸಿದ್ರಾಮ ಕುಸಾಳೆ,ಸುಭಾಷ ಜಾಪೂರ,ಭೀಮಯ್ಯ ಗುತ್ತೆದಾರ,ಶ್ರೀಧರ ಜೋಷಿ,ಜ್ಯೋತಿ ಶರ್ಮಾ, ಜಯಶ್ರೀ ಸೂಡಿ,ಭಾಗಿರಥಿ ಗುನ್ನಾಪೂರ ಇತರರು ಇದ್ದರು.

Contact Your\'s Advertisement; 9902492681

ಕನ್ನಡ ಸಾಹಿತ್ಯ ಪರಿಷತ್ತ :ಮರಲಿಂಗ ಕಮರಡಗಿ ಧ್ಯಜಾರೋಹಣ ಮಾಡಿದರು.ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್, ಬಸವರಾಜ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here