ವಾಡಿ: ಸ್ವಾತಂತ್ರೋತ್ಸವದ ಸಂಭ್ರಮ ಹೆಚ್ಚಿಸುತ್ತಿದ್ದ ಶಾಲೆಗಳು, ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಈ ವರ್ಷ ಬಾಗಿಲು ಮುಚ್ಚಿಕೊಂಡಿದ್ದರಿಂದ ಬೀದಿಗಳಲ್ಲಿ ಸಾಗುತ್ತಿದ್ದ ಪುಟಾಣಿ ವಿದ್ಯಾರ್ಥಿಗಳ ಆಕರ್ಷಕ ಪ್ರಭಾತ್‌ಪೇರಿಗಳು ಕಂಡು ಬರಲಿಲ್ಲ. ಪರಾರಿ ಬಂಟಿಂಗ್ಸ್ ಮತ್ತು ದೇಶಭಕ್ತಿ ಗೀತೆಗಳ ಸುಳಿವಿರಲಿಲ್ಲ. ತ್ರೀವರ್ಣ ಭಾವುಟಗಳನ್ನು ಹಿಡಿದು ತೊದಲು ನುಡಿಗಳಲ್ಲಿ ಕೇಳಿಬರುತ್ತಿದ್ದ ರಾಷ್ಟ್ರಪರ ಘೋಷಣೆಗಳು ಕೇಳಿಬರಲಿಲ್ಲ.
ಪಥಸಂಚಲನ, ಹಾಡು, ನೃತ್ಯ, ನಾಟಕಗಳು ಏರ್ಪಡಲಿಲ್ಲ. ರಾಷ್ಟ್ರಧ್ವಜಕ್ಕೆ ಕೇಸರಿ ಬಿಳಿ ಹಸಿರು ವರ್ಣದ ಭಾವುಟ ಮೇಲಕ್ಕೇರಿ ಪಟಪಟಿಸಿತ್ತೇವಿನಹ ಸ್ವಾತಂತ್ರ್ಯದ ಆ ಸಂಭ್ರಮ ಎಲ್ಲೂ ಕಣ್ಣುಕಟ್ಟಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಗುಣಗಾನಕ್ಕೂ ಭಾರಿ ಬರ ಎದ್ದುಕಾಣಿಸಿತು. ಸ್ಥಳೀಯ ರಾಜಕಾರಣಿಗಳ ನಾಲಿಗೆಯಿಂದ ಹೊರಡಿದ ರಾಷ್ಟ್ರಗೀತೆ ರಾಗ ಲಯ ತಪ್ಪಿ, ಸಿಮೆಂಟ್ ನಗರಿ ವಾಡಿ ವ್ಯಾಪ್ತಿಯಲ್ಲಿ ೭೪ನೇ ಸ್ವಾತಂತ್ರ್ಯ ಉತ್ಸವ ಕಳೆಗುಂದಿದ್ದು, ಸ್ಥಳೀಯರಲ್ಲಿ ಬೇಸರವನ್ನುಂಟುಮಾಡಿತು.
ಪುರಸಭೆ ಕಚೇರಿ: ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲೇ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ಕಿರಿಯ ಅಭಿಯಂತರರ ರಾಜಕುಮಾರ ಅಕ್ಕಿ, ಕಂದಾಯ ಅಧಿಕಾರಿ ಎಂ.ಪಂಕಜಾ, ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಪುರಸಭೆ ಸದಸ್ಯರಾದ ದೇವಿಂದ್ರ ಕರದಳ್ಳಿ, ಶರಣು ನಾಟೀಕಾರ, ತಿಮ್ಮಯ್ಯ ಪವಾರ, ಮಹ್ಮದ್ ಗೌಸ್, ಸಿಬ್ಬಂದಿಗಳಾದ ಈಶ್ವರ ಅಂಬೇಕರ, ಕೆ.ವಿರೂಪಾಕ್ಷಿ, ಮನೋಜಕುಮಾರ ಹಿರೋಳಿ, ಮುಖಂಡರಾದ ಬಶೀರ ಖುರೇಶಿ, ಮಹ್ಮದ್ ಆಶ್ರಫ್, ವಿಜಯಕುಮಾರ ಸಿಂಗೆ, ಕಿಶನ ಜಾಧವ ಪಾಲ್ಗೊಂಡಿದ್ದರು.
ಬಿಜೆಪಿ ಶಕ್ತಿಕೇಂದ್ರ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಲಕ್ಷಾಂತರ ಜನ ಭಾರತೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪೂಜೆ ನೆರವೇರಿಸಿದರು. ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ನಿವೇದಿತಾ ದಹಿಹಂಡೆ, ಪುರಸಭೆ ಸದಸ್ಯ ರಾಜೇಶ ಅಗರವಾಲ, ಮುಖಂಡರಾದ ಹರಿ ಗಲಾಂಡೆ, ನಿರ್ಮಲಾ ಇಂಡಿ, ವಿಠ್ಠಲ ನಾಯಕ, ಗಿರಿಮಲ್ಲಪ್ಪ ಕಟ್ಟಿಮನಿ, ದೌಲತರಾವ ಚಿತ್ತಾಪುರಕರ, ಬಸವರಾಜ ಕೀರಣಗಿ, ವಿಜಯಕುಮಾರ ಪವಾರ, ವಿಶಾಲ ನಿಂಬರ್ಗಾ, ಬಿ.ಕೆ.ಕಾಳಪ್ಪ ಪಾಲ್ಗೊಂಡಿದ್ದರು.
ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆ: ಮಹಾಮಾರಿ ಕೊರೊನಾ ಸಂಕಟದಲ್ಲಿ ಮುಖ್ಯಶಿಕ್ಷಕಿ ಸಿಸ್ಟರ್ ಸೆಲೀನ್ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸಿಸ್ಟರ್ ತೆಕಲಾಮೇರಿ, ಶಿಕ್ಷಕರಾದ ಸುಭಾಷ ಮೇಲಕೇರಿ, ಡಾನ್ ಬಾಸ್ಕೋ, ಮಮತಾ, ಸುಪ್ರೀಯಾ, ಮೇಘಾ, ಇಮ್ಯಾನುವೆಲ್, ಪ್ರಕಾಶ, ಚಾರ್ಲೇಸ್ ಪಾಲ್ಗೊಂಡಿದ್ದರು.