ಸುರಪುರ: ನಮ್ಮ ಸಮಾಜದ ಹೆಮ್ಮೆಯ ನಾಯಕ ಸಂಗೊಳ್ಳಿ ರಾಯಣ್ಣನವರು ಸರ್ವ ಜನರ ಮೆಚ್ಚಿನ ನಾಯಕರಾಗಿದ್ದು,ಅವರ ಪ್ರತಿಮೆಯನ್ನು ಅನಾವರಣಗೊಳಿಸಿಕೊಟ್ಟ ಕನಕ ಗುರುಪೀಠದ ಸಿದ್ದರಾಮಾನಂದಪುರ ಸ್ವಾಮೀಜಿ,ಅಗತೀರ್ಥ ಶಿರೂರು ಶಾಖಾ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ,ಕಕ್ಕೇರಾ ಸೋಮನಾಥ ದೇವಾಲಯದ ನಂದಣ್ಣ ಪೂಜಾರಿ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕರಿಗೆ,ರಾಜಾ ಲಕ್ಷ್ಮೀನಾರಾಯಣ ನಾಯಕರಿಗೆ ಹಾಗು ನಮ್ಮ ಸಮಾಜದ ಎಲ್ಲಾ ಮುಖಂಡರುಗಳಿಗೆ ಅಭಿನಂಧನೆ ಸಲ್ಲಿಸುವುದಾಗಿ ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ ತಿಳಿಸಿದರು.
ಅಲ್ಲದೆ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ಕುರಿತು ಮಾಹಿತಿ ನೀಡಿ,ಪ್ರತಿಮೆಯನ್ನು ಸವದತ್ತಿಯಲ್ಲಿ ತಯಾರಿಸಲಾಗಿದ್ದು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಸುಮಾರು ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಮೂರ್ತಿಗೆ ಸುಮಾರು ನೂರು ವರ್ಷದ ಬಾಳಿಕೆಯ ಬಗ್ಗೆ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ ಸಣ್ಣ ಮರೆಪ್ಪ ದೊರೆ ಮಲ್ಲಣ್ಣ ಐಕೂರ ಹಣಮಂತ ಭದ್ರಾವತಿ ನಿಂಗಣ್ಣ ಐಕೂರ ಭೀಮಣ್ಣ ಹಳಿಮನಿ ಭೀಮಣ್ಣ ಕೆಂಗುರಿ ರಾಮು ಆಲ್ದಾಳ್ ಅಯ್ಯಪ್ಪ ಕೆಂಗುರಿ ಭೀಮರಾಯ ಕುಂಬಾರ ಸೇರಿದಂತೆ ಅನೇಕರಿದ್ದರು.