ಜೇವರ್ಗಿ: ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬಗಳನ್ನು ಸರಳವಾದ ರೀತಿಯಲ್ಲಿ ಆಚರಿಸುವಂತೆ ಹಾಗೂ ಸಮಾಜೀಕ ಅಂತರದ ಜೋತೆಯಲ್ಲಿ ಧಾರ್ಮಿಕ ಸಾಮರಸ್ಯ ಕದಡದರೀತಿ ಆಚರಿಲು ಇಲ್ಲಿನ ತಹಶೀಲ್ದಾರರ ಕಛೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ತಿಳಿಸಲಾಯಿತು.
ಯಾವುದೇ ರೀತಿಯಲ್ಲಿ ಸಾಮಾಜೀಕ ಜಾಲತಾಣವು ಸೇರಿದಂತೆ ಬ್ಯಾನರ್ ಹಾಗೂ ಮೋಬಾಯಿಲ್ ಪೋನಗಳಲ್ಲಿ ಅಹಿತಕರ ಸಂದೇಶ ಕಳಿಸುವುದು ಹಾಗೂ ಅನವಶ್ಯಕ ಘೋಷಣೆ ಸೇರಿದಂತೆ, ಧ್ವನಿವರ್ಧಕ ಗಳನ್ನು ಬಳಸದಂತೆ ತಿಳಿಸಲಾಯಿತು.
ಷಈ ಸಭೆಯಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಸಿದ್ದರಾಯ ಬೋಸಗಿ. .ಸಿ.ಪಿ.ಐ ರಮೇಶ ರೋಟ್ಟ ,ಪಿ.ಎಸ್.ಐ ಮಂಜುನಾಥ ಹೂಗಾರ, ಪುರಸಭೆಯ ಮುಖ್ಯಾಧಿಕಾರಿ ಲಕ್ಷ್ಮೀಶ ಸೇರಿದಂತೆ ತಾಲೂಕಿನ ವಿವಿಧ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಒಂದೊಂದು ವಾರ್ಡಗ ಒಂದೇ ಗಣೇಶನನ್ನು ಕೂರಿಸಲು ಅನುಮತಿ ನೀಡಲಾಗಿದೆ. ಮನೆಗಳಲ್ಲಿ 2ಅಡಿ ವಾರ್ಡಗಳಲ್ಲಿ 4 ಅಡಿ ಗಣೇಶನನ್ನು ಕೂರಿಸಲು ಅನುಮತಿ ನೀಡಲಾಗಿದೆ. ಯಾವುದೇ ಡಿಜಿಟಲ್ ಸೌಂಡ್ ಸಿಸ್ಟಮ್ ಅಗಳನ್ನು ಬಳಸುವಂತಿಲ್ಲ. ಹಾಗೂ ಯಾವುದೇ ವ್ಯಕ್ತಿಗಳ ಪೋಸ್ಟರುಗಳು ಮತ್ತು ಬ್ಯಾನರ್ಗಳು ಹಾಕುವಂತಿಲ್ಲ ಎಂದು ಶಾಂತಿ ಸಭೆಯಲ್ಲಿ ತಾಲೂಕ ದಂಡಾಧಿಕಾರಿಗಳ ಹೇಳಿದರು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಡಿಜಿಟಲ್ ಸೌಂಡ್ ಸಿಸ್ಟಮ್ ಆಗಲಿ ಹಾಗೂ ಇತರೆ ಪೋಸ್ಟರುಗಳು ಬ್ಯಾನರುಗಳು ಹಾಕುವುದಾಗಲಿ ಮಾಡಿದರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ರಾಜಶೇಖರ್ ಸಿರಿ, ಮಲ್ಲಣ್ಣ ಆದೋನಿ, ಜಮಾದಾರ್ ಸಾಬ್, ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷರು, ವಿಶ್ವ ಹಿಂದು ಪರಿಷದ್ ಸಂಘಟನೆ ಸದಸ್ಯರು, ಮುಸ್ಲಿಂ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಈ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು.