ಶಹಾಪುರ: ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನು ಶಿವಶಾಂತವೀರ ದಿವಾಕರ್ ಸಾಬೀತುಪಡಿಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸಾಗಿ ಕೇಂದ್ರ ಸರಕಾರದ(government of india national career service centre bangalore) ಉಪ ಪ್ರಾದೇಶಿಕ ಉದ್ಯೋಗ ಅಧಿಕಾರಿಯಾಗಿ ಇಂದು ಬೆಂಗಳೂರಿನಲ್ಲಿ (sub regional employment officer ) ಅಧಿಕಾರ ಸ್ವೀಕರಿಸಿದರು.
2017 ರಲ್ಲಿ ಭಾರತ ಯುಪಿಎಸ್ಸಿ ಪರೀಕ್ಷೆಗೆ ಒಟ್ಟು 8 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು ಆ 8 ಹುದ್ದೆಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಒಬ್ಬರೇ ಒಬ್ಬರು ಇವರೇ ಈ ಶಿವಶಾಂತವೀರ ದಿವಾಕರ ಅವರು.ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ಇಂದು ಕರ್ನಾಟಕಕ್ಕೆ ವರ್ಗಾವಣೆಗೊಂಡು (ministry of labour and employment directorate general of employment Bangalore ) ಕಾರ್ಯನಿರ್ವಹಿಸುತ್ತಿದ್ದಾರೆ.
ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ್ದಾರೆ,ಶಿವಶಾಂತವೀರ ದಿವಾಕರ್ ಅವರದು ಇದು 4 ನೇ ಹುದ್ದೆ ತಂದೆಯ ಆಸೆಯಂತೆ ಯುಪಿಎಸ್ ಸಿ. ಪರೀಕ್ಷೆ ಬರೆದು ಅಧಿಕಾರಿ ಆಗಬೇಕೆಂಬ ಕನಸು ಇಂದು ನನಸು ಮಾಡಿದ್ದಾರೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಠ ಬಿಡದೆ ಹಗಲು ಇರುಳೆನ್ನದೆ ಸತತ ಅಭ್ಯಾಸ ಮಾಡಿ ತಮ್ಮ ಗುರಿ ತಲುಪಿ ಜೀವನದಲ್ಲಿ ಯಶಸ್ವಿ ಕಂಡಿದ್ದಾರೆ. ಶಿವಶಾಂತವೀರ ದಿವಾಕರ್ ಅವರು ಬಹಳ ಸೂಕ್ಷ್ಮ ಹಾಗೂ ಸಂವೇದನಾ ಶೀಲ ಮೃದು ಮನಸ್ಸಿನ ಸ್ನೇಹಜೀವಿಯೂ ಕೂಡ ಹೌದು ಗುರಿ ಸಾಧಿಸುವ ವಿದ್ಯಾರ್ಥಿಗಳಿಗೆ ಇವರು ಸ್ಫೂರ್ತಿಯಾಗಿದ್ದಾರೆ.ಸ್ನೇಹಿತನ ಸಾಧನೆಗೆ ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಪತ್ರಕರ್ತ ಬಸವರಾಜ ಸಿನ್ನೂರ ಹಾಗೂ ಅಕ್ಬರ್ ಹೊಟಗಿ ಹರ್ಷ ವ್ಯಕ್ತಪಡಿಸಿದ್ದಾರೆ.