ರೈತರೆ ಮರಗಳನ್ನು ಬೆಳೆಸಿ ನಾಡು ಸಮೃದ್ಧಗೊಳಿಸಿ: ಮೌಲಾಲಿ ಸಾಬ್

0
31

ಸುರಪುರ: ಅರಣ್ಯ ಇಲಾಖೆಯಿಂದ ಹಸಿರು ಕರ್ನಾಟಕ ಯೊಜನೆ ಅಂಗವಾಗಿ ನಗರದ ರಂಗಂಪೇಟೆಯ ತರಕಾರಿ ಮಾರುಕಟ್ಟೆಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಫಾರೆಸ್ಟ್ ರೇಂಜ್ ಆಫೀಸರ್ ಮೌಲಾಲಿ ಸಾಬ್ ಮಾತನಾಡಿ,ಸರಕಾರ ನಾಡನ್ನು ಹಸಿರುಗೊಳಿಸುವ ಮೂಲಕ ಮಳೆ ಬೆಳೆ ಚೆನ್ನಾಗಿ ಬರಲೆಂದು ಆಶಯದಿಂದ ಹಸಿರು ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದೆ.ಈ ಯೋಜನೆಯಡಿಯಲ್ಲಿ ರೈತರಿಗೆ ಹಾಗು ಸಾರ್ವಜನಿಕರಿಗೂ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಸಸಿಗಳನ್ನು ತೆಗೆದುಕೊಳ್ಳುವ ರೈತರು ಮತ್ತು ಸಾರ್ವಜನಿಕರು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಬೆಳವಣಿಗೆಗೆ ಮುಂದಾಗಬೇಕಿದೆ.ಮರಗಳು ಬೆಳೆದರೆ ಮಳೆ ಬೆಳೆಯು ಚೆನ್ನಾಗಿ ಬರಲಿದೆ.ಉತ್ತಮ ಪರಿಸರವನ್ನು ನಿರ್ಮಿಸಲು ಮರ ಬೆಳೆಸುವುದು ಮುಖ್ಯವಾಗಿದೆ.ಆದ್ದರಿಂದ ರೈತರು ಖಾಲಿ ಜಾಗಗಳಲ್ಲಿ ಮರಗಳನ್ನು ಬೆಳೆಸುವಂತೆ ತಿಳಿಸಿದರು.

ನಂತರ ಹೊಂಗೆ ಬೇವು ಹುಣಸೆ ಬಾದಾಮಿ ನಿಂಬೆ ಸೇರಿದಂತೆ ವಿವಿಧ ಜಾತಿಯ ಸುಮಾರು ಒಂದು ಸಾವಿರ ಸಸಿಗಳನ್ನು ರೈತರು ಮತ್ತು ಸಾರ್ವಜನಿಕರಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಡೆಪ್ಯೂಟಿ ಆರ್.ಎಫ್‍ಗಳಾದ ಶರಣಪ್ಪ ಕುಂಬಾರ ಪರಶುರಾಮ ನಗರಸಭೆ ಸದಸ್ಯ ಮಹ್ಮದ್ ಗೌಸ್ ಶ್ರೀಮಂತ ಚಲುವಾದಿ ಅರಣ್ಯ ರಕ್ಷಕ ಉಪಳಪ್ಪ ಸೇರಿದಂತೆ ಅನೇಕ ಜನ ಸಿಬ್ಬಂದಿಗಳು ಹಾಗು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here