ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿರುವ ಕ್ರಮವನ್ನು ಖಂಡಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯಿಂದ ಪ್ರತಿಭಟನೆ

0
55

ಶಹಾಬಾದ:ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ ಕಚೇರಿಯವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ ಮಾತನಾಡಿ, ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಸ್ಥಾಪಿಸಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದು ಖಂಡನೀಯ.ಎರಡು ವರ್ಷಗಳ ಹಿಂದೆ ಅಣ್ಣಿಗೇರಿ ಪಟ್ಟಣದಲ್ಲೂ ಕಾರಣವಿಲ್ಲದೇ ಮೂರ್ತಿ ತೆರವು ಮಾಡಲಾಗಿತ್ತು. ಇದರಿಂದ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳಿಗೆ ಎಲ್ಲಿಲ್ಲದ ಅಸಮಾಧಾನವಾಗಿದೆ.ದೇಶ ಭಕ್ತಿಯ ಬಗ್ಗೆ ಮಾತನಾಡುವ ಬಿಜೆಪಿಯ ರಾಜ್ಯ ಸರಕಾರ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಅರ್ಪಿಸಿದ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವುಗೊಳಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.ಒಂದು ವೇಳೆ ವೀರ ಸಾವರಕರ್,ದೀನದಯಾಳ ಉಪಾಧ್ಯಾಯ ಅವರಂತ ಮೂರ್ತಿಗಳು ತೆರವುಗೊಳಿಸಿದ್ದರೇ ಇದೇ ರೀತಿ ಸುಮ್ಮನಾಗುತ್ತಿದ್ದರೇ ? ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿಯವರು ಅಸಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ವೋಟ ಬ್ಯಾಂಕಿಗಾಗಿ ರಾಜಕಾರಣಿಗಳು ಏನೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ರಾಜ್ಯದ ಜನತೆಗೆ ಅರಿವಾಗುತ್ತಿದೆ. ಕೂಡಲೇ ಪೀರನವಾಡಿ, ಅಣ್ಣಿಗೇರಿಯಲ್ಲಿ ರಾಯಣ್ಣನ ಮೂರ್ತಿ ಸರಕಾರವೇ ಪ್ರತಿಷ್ಠಾಪನೆ ಮಾಡುವ ಮೂಲಕ ದೇಶಭಕ್ತ ರಾಯಣ್ಣ ಅವರಿಗೆ ಗೌರವ ಸಲ್ಲಿಸಬೇಕು. ಇಲ್ಲದಿದ್ದರೇ ನಿರಂತರವಾಗಿ ಸರಕಾರದ ವಿರುದ್ಧ ಹೋರಾಟ ನಡೆಸಲಾಗುವುದೆಂದು ಹೇಳಿದರು.

ದಸಂಸ ಮುಖಂಡ ಕೃಷ್ಣಪ್ಪ ಕರಣಿಕ್, ಜೆಡಿಎಸ್ ಮುಖಂಡ ಲೋಹಿತ್ ಕಟ್ಟಿ, ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಮಲ್ಲಿಕಾರ್ಜುನ್ ಪಟ್ಟಣಕರ್,ಡಿ.ಸಿ.ಹೊಸಮನಿ, ಶಿವಯೋಗಿ ಕುಂಟನ್,ಶರಣಗೌಡ ಪಾಟೀಲ,ಯಲ್ಲಾಲಿಂಗ ಪೂಜಾರಿ,ನಿಂಗಣ್ಣ ರದ್ದೆವಾಡಗಿ,ಮರಲಿಂಗ ಕಮರಡಗಿ,ಮಂಜುನಾಥ ದೊಡ್ಡಮನಿ,ಶಾಂತಪ್ಪ ಪೂಜಾರಿ,ಸುನೀಲ ಪೂಜಾರಿ,ನಿಂಗಣ್ಣ ಹೂಗೊಂಡ,ಸಾಯಿಬಣ್ಣ ಕೊಲ್ಲೂರ್,ಸಿದ್ದಲಿಂಗ ಬೊಮ್ಮನಳ್ಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here