ಬಸವ ತತ್ವ ಎಂದರೆ ಮೌಢ್ಯ ಬಿಟ್ಟು ವೈಚಾರಿಕವಾಗಿ ಬದುಕುವುದು: ವಿಶ್ವರಾಧ್ಯ ಸತ್ಯಂಪೇಟೆ

0
205

ಸುರಪುರ: ಬಸವಾದಿ ಶರಣರ ಅನುಭಾವದ ವಿಚಾರಗಳು ಮತ್ತು ವಚನಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡು ನಡೆಯಬೇಕಾಗಿದೆ. ಬಸವ ತತ್ವ ಎಂದರೆ ಮೌಢ್ಯ ಬಿಟ್ಟು ವೈಚಾರಿಕವಾಗಿ ಬದುಕುವುದಾಗಿದೆ ಎಂದು ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿದರು.

ನಗರದ ಸತ್ಯಂಪೇಟೆಯಲ್ಲಿ ವೀರಭದ್ರಪ್ಪ ಕೆಂಭಾವಿ ಇವರ ಮನೆಯ ಗುರು ಪ್ರವೇಶದ ಅಂಗವಾಗಿ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಮನುಷ್ಯ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.ಎಲ್ಲರನ್ನು ಪ್ರೀತಿ ಗೌರವದಿಂದ ಕಾಣುವುದನ್ನು ಬಸವ ತತ್ವ ಕಲಿಸುತ್ತದೆ.ಇವನಾರವ ಎನ್ನದೆ ಇವ ನಮ್ಮವ ಎಂಬ ಭಾವನೆಯನ್ನು ಬೆಳೆಸುತ್ತದೆ.ಆದ್ದರಿಂದ ಎಲ್ಲರು ಬಸವಮಾರ್ಗಿಗಳಾಗೋಣ ಎಂದರು.

Contact Your\'s Advertisement; 9902492681

ಮತ್ತೋರ್ವ ಶರಣ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ಮಾತನಾಡಿ ಇಂದು ಅನೇಕರು ಬರೀ ಆಡಂಬರದ ಆಚರಣೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.ಆದರೆ ಬಸವ ತತ್ವ ಎಂದರೆ ಸರಳತೆಯಾಗಿದೆ.ಇಂದು ವೀರಭದ್ರಪ್ಪ ಕೆಂಭಾವಿಯವರು ವಚನಗಳ ವಿಚಾರವನ್ನು ಅರಿತು ಗುರು ಪ್ರವೇಶ ಮಾಡುತ್ತಿದ್ದಾರೆ ಇದರಿಂದ ಸರಳತೆ ಮತ್ತು ದುಂದು ವೆಚ್ಚ ದೂರವಾಗಿದೆ.ಇದೀ ಹೋಮ ಹವನವೆಂದು ಹೋಗಿದ್ದರೆ ಅನಾವಶ್ಯಕವಾಗಿ ಸಾವಿರಾರು ರೂಪಾಯಿಗಳನ್ನು ವ್ಯರ್ಥ ಮಾಡಬೇಕಾಗುತ್ತಿತ್ತು.ಇಂತಹ ಸರಳತೆಯನ್ನು ಬಸವ ತತ್ವ ಕಲಿಸುತ್ತದೆ.ಆದರೆ ಜನರಿಗೆ ಸರಳತೆಯ ಬಗ್ಗೆ ಅರಿವಿಲ್ಲದೆ ಬಸವ ಮಾರ್ಗವೆಂದರೆ ಕಡೆಗಣಿಸಿ ಕಾಣುವವರ ಸಂಖ್ಯೆ ಹೆಚ್ಚುತ್ತಿರೋದು ಬೇಸರದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಚೆನ್ನಮಲ್ಲಿಕಾರ್ಜುನ ಗುಂಡಾನೂರ ಹಾಗು ಮಹಾದೇವಪ್ಪ ಗಾಳೆನೂರ ವಚನ ಗಾಯ ಮಾಡಿದರು.ನಂತರ ಶರಣಪ್ಪ ಯಾಳಗಿ ಹಾಗು ಇಂದೂಧರ ಸ್ವಾಮೀಜಿ ಗಡಿಸೋಮನಾಳ ಮಾತನಾಡಿದರು.ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here