ಕಲಬುರಗಿ: ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವೀರಶೈವ ಲಿಂಗಾಯತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾ ವೀರಶೈವ ಸಮಾಜದ ವತಿಯಿಂದ ನಗದು ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವಿದ್ಯಾರ್ಥಿಗಳು ತಮ್ಮ ಅಂಕಪಟಿ ಪ್ರತಿಯೊಂದಿಗೆ ಹೆಸರು ನೋಂದಾಯಿಸಲು ಸೆಪ್ಟೆಂಬರ್ ಕೊನೆಯವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಲು ಮೊ: 9035071777, 6362323770 ಸಂಪರ್ಕಿಸಬಹುದು.
ನಗರದಲ್ಲಿ ಇತ್ತೀಚಿಗೆ ಸಮಾಜದ ಯುವಕ ವೀರೇಶ ಕಡಗಂಚಿ ಅವರನ್ನು ಕೋಲೆಮಾಡಿದ್ದನ್ನು ಜಿಲ್ಲಾ ವೀರಶೈವ ಸಮಾಜ ಖಂಡಿಸಲಾಯಿತು.
ತಪಿಸ್ಥರನ್ನು ಕೂಡಲೆ ಬಂಧಿಸಿ ಶಿಕ್ಷೆ ನೀಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ ಕಲ್ಯಾಣಪ್ಪಾ ಪಾಟೀಲ ಮಳಖೆಡ, ಎಸ್.ವಿ.ಮಠಪತಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ, ಹಿರಿಯ ಸದಸ್ಯರಾದ ಶಿವಪುತ್ರಪ್ಪಾ ಡೆಂಕಿ, ಕೋಶಾಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ, ಸಂಗಮೇಶ ನಾಗನಳ್ಳಿ, ರವಿ ಬಿರಾದಾರ, ರಮೇಶ ಮಾಲಿಪಾಟೀಲ, ರಾಜಕುಮಾರ ಕೋಟೆ, ಮಂಜುನಾಥ ಹಾಗರಗಿ, ಅಲೋಕ ಸೊರಡೆ, ವಿ.ಸಿ.ಪಾಟೀಲ, ವಿಜಯಕುಮಾರ ಬಾಬಾ, ಜಗನಾಥ ಪಟ್ಟಣಶೆಟ್ಟಿ, ಶಾಂತಕುಮಾರ ವಾಡೆದ, ಶರಣು ಖಾನಾಪೂರ ಸೇರಿದಂತೆ ಇತರರು ಇದ್ದರು.