ಮಹಿಳಾ ವ್ಯಾಪಾರಿಗಳಿಗೆ ರೂ.೧೦ ಸಾವಿರ ಪ್ರೋತ್ಸಾಹಧನ

0
16

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಗ್ರಾಮದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸಮೃದ್ಧಿ ಯೋಜನೆಯಡಿ ಬೀದಿ ವ್ಯಾಪಾರಿ, ಹಣ್ಣು ಮತ್ತು ತರಕಾರಿ ಮಾರುವ ಮಹಿಳೆಯರಿಗೆ ರೂ.೧೦ ಸಾವಿರ ಪ್ರೋತ್ಸಾಹ ಧನದ ಚೆಕ್‌ನ್ನು ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ವಿತರಿಸಿದರು.

ನಂತರ ಪ್ರತಿಕ್ರಿಯಿಸಿದ ಶಶಿಕಲಾ ಟೆಂಗಳಿ ಅವರು, ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ಇಲ್ಲದೆ ಮನೆಯಲ್ಲೆ ಕುಳಿತು ಸಂಕಷ್ಟ ಎದುರಿಸುತ್ತಿದ್ದ ಬಿದಿ ವ್ಯಾಪಾರಿಗಳಿಗೆ ನಿಗಮದಿಂದ ಆಸರೆ ಕಲ್ಪಿಸಲಾಗಿದೆ ಎಂದರು.

Contact Your\'s Advertisement; 9902492681

ಗ್ರಾ.ಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಣಗೌಡ ಪಾಟೀಲ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಯಾಗಾಪುರ, ನಾಗರಾಜ ಪಾಟೀಲ್ ಹಾಗೂ ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here