ಕಲಬುರಗಿ: ಈ ಹಿಂದೆ ಕಲಬುರಗಿ ಎಸ್.ಪಿ ಆಗಿದ್ದ ಐಪಿಎಸ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮತ್ತೆ ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಿನ್ಸಿಪಾಲ್ & ಎಸ್.ಪಿ ಆಗಿ ನೇಮಕ ಮಾಡಿ ಸರಕಾರದ ಆಧೀನ ಕಾರ್ಯದರ್ಶಿಯಾದ ನಾಗಪ್ಪ ಎಸ್ ಪರೀತ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕಲಬುರಗಿ ಎಸ್.ಪಿಯಾಗಿ ಸೇವೆ ಸಲ್ಲಿಸಿದ ಯಡಾ ಮಾರ್ಟಿನ್ ಅವರು ಉಡುಪಿಯ ನಕ್ಸಲ್ ಕಾರಿಡಾರಗೆ ವರ್ಗಾವಣೆಯಾಗಿ ಹೋಗಿದ್ದರು. ಪ್ರಸ್ತುತ ಮತ್ತೆ ಕಲಬುರಗಿ ಪೊಲೀಸ್ ತರಬೇತಿ ಕೇಂದ್ರಕ್ಕೆ ನಿಯುಕ್ತರಾಗಿದ್ದಾರೆ.
ಯಡಾ ಮಾರ್ಟಿನ್ ಸೇರಿ ರಾಜ್ಯದ ಐವರು ಐಪಿಎಸ್ ಅಧಿಕಾರಿಗಳು ಬೆಂಗಳೂರು ವಿವಿಧ ವಿಭಾಗಗಳಿಗೆ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುಲು ಆದೇಶಿದ್ದಾರೆ.