ಸುರಪುರ: ಈಬಾರಿ ಏನು ನೆರೆಯಿಂದ ಬೆಳೆ ಹಾನಿಯಾಗಿದೆ ಇದಕ್ಕೆ ಎನ್‍ಡಿಆರ್‍ಎಫ್ ನಿಯಮದಂತೆ ಪರಿಹಾರ ನೀಡಲಾಗುವುದು ಹಾಗೂ ಮನೆಗಳು ಕಳೆದಕಕೊಂಡವರಿಗೆ ಕಳೆದ ಬಾರಿಯಂತೆ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ಉಂಟಾದ ನೆರೆ ಹಾನಿ ವೀಕ್ಷಣೆಗೆ ಆಗಮಿಸಿದ್ದ ಸಚಿವರು ಸುದ್ದರಿಗಾರರೊಂದಿಗೆ ಮಾತನಾಡಿದರು. ಕಳೆದ ಬಾರಿ ನೆರೆ ಪರಿಹಾರ ವಿತರಣೆಯಲ್ಲಾದ ದೋಷದ ಬಗ್ಗೆ ಕೇಳಲಾದ ಪ್ರಶ್ನೆಗೆ ವಿವರಣೆ ನೀಡಿ, ಈ ಕುರಿತು ಅಧಿಕಾರಿಗಳೂಂದಿಗೆ ಚರ್ಚಿಸಿ ಆರೀತಿಯೇನಾದರು ಲೋಪಗಳು ಕಂಡುಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕಿನ ದೇವಾಪುರ ಹಳ್ಳದ ಸೇತುವೆ ಮೇಲೆ ಕೆಲ ನಿಮಿಷಗಳ ಕಾಲ ನಿಂತು ನೇರೆ ಪೀಡಿತ ಸ್ಥಳಗಳನ್ನು ವೀಕ್ಷಿಸಿದರು. ರಸ್ತೆಯಲ್ಲಿಯೆ ನಿಂತು ನೆರೆ ವೀಕ್ಷಣೆ ನಡೆಸಿದ್ದಕ್ಕೆ ಸಂತ್ರಸ್ಥರು ಬೇಸರ ವ್ಯಕ್ತಪಡಿಸಿ ಈರೀತಿ ನೆರೆ ವೀಕ್ಷಣೆ ನಡೆಸುವುದಾದರೆ ಇವರು ಬೆಂಗಳೂರಿನಿಂದ ಇಲ್ಲಿಯವರೆಗೂ ಬರುವ ಅವಶ್ಯಕತೆ ಇದ್ದಿಲ್ಲಾ ಕಳೆದಬಾರಿ ನಮಗಾದ ನಷ್ಟ ಪರಿಹಾರವನ್ನು ಸರ್ಕಾರ ಇನ್ನು ವಿತರಣೆ ಮಾಡಿಲ್ಲಾ ಈಗ ಈರೀತಿ ಸಚಿವರು ನೆರೆ ಸಮೀಕ್ಷೆ ನಡೆಸಿರುವುದನ್ನು ನೋಡಿದರೆ ಈ ಬಾರಿಯೂ ನಮಗೆ ಪರಿಹಾರ ದೊರಕುವುದು ಅನುಮಾನವಿದೆ ಎಂದು ಜನರು ಅಸಮಾಧಾನವನ್ನು ಹೊರಹಾಕಿದ್ದು ಕಂಡುಬಂತು.
ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಜಿಪಂ ಅಧ್ಯಕ್ಷ ಬಸನಗೌಡ ಯಡಿಯಾಪುರ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಡಿಸಿ ಶಂಕರಗೌಡ ಸೋಮನಾಳ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಅಧಿಕಾರಿಗಳಿದ್ದರು.