ಸಾಹಿತಿ ಡಾ. ಈಶ್ವರಯ್ಯ ಮಠ ನಿಧನಕ್ಕೆ ಬಸವ ಸಮಿತಿ ಸಂತಾಪ

0
52

ಕಲಬುರಗಿ: ಸಾಹಿತಿ ಡಾ. ಈಶ್ವರಯ್ಯ ಮಠ ಅವರು ಕಲ್ಯಾಣ ಕರ್ನಾಟಕ ಕಂಡ ಒಬ್ಬ ಪ್ರತಿಭಾನ್ವಿತ ಕನ್ನಡ ಪ್ರಾಧ್ಯಾಪಕ. ಉತ್ತಮ ವಾಗ್ಮಿ. ಅಪಾರ ಶಿಷ್ಯ ಬಳಗದ ಆದರ್ಶ ಶಿಕ್ಷಕ. ಕನ್ನಡ ಕಾಳಜಿಯ ಚಿಂತಕ. ಎದುರಿಗೆ ಕುಳಿತವರನ್ನು ತಮ್ಮ ಮಾತಿನಮೂಲಕ ಸೆಳೆಯುವ ಶೈಲಿ ಅವರಿಗೆ ಕರಗತವಾಗಿತ್ತು. ಬೆಂಗಳೂರು ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಪ್ರಾರಂಭದಲ್ಲಿ ಕಲಬುರಗಿ ಬಸವ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ತಿಳಿಸಿದರು.

ಅವರ ಸೇವೆ ಇನ್ನೂ ಬೇಕಿತ್ತು. ಅವರ ಅಕಾಲಿಕ ಮರಣದಿಂದಾಗಿ ಎಲ್ಲರಿಗೂ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಪತ್ನಿ, ಮಕ್ಕಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಬಸವಾದಿ ಶರಣರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇಸುವೆ ಎಂದರು.

Contact Your\'s Advertisement; 9902492681

ರಾಜ್ಯ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ವೀರಣ್ಣ ದಂಡೆ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಕೆ. ಉದ್ದಂಡಯ್ಯ ಮತ್ತು ಎಲ್ಲಾ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here