ಕಲಬುರಗಿ: ಮಹಾನಗರ ಪಾಲಿಕೆಯ ಆಡಳಿತವನ್ನು ಬಲವರ್ಧನೆಗೊಳಿಸಿ ಎಲ್ಲಾ ಶಾಖೆಗಳ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆ ಕರೆದು ಆದೇಶಿಸಬೇಕೆಂದು ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್ ಭಾಸಗಿ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಭಾಸಗಿ ಮಾತನಾಡುತ್ತಾ ಅವರು, ಮಹಾನಗರ ಪಾಲಿಕೆಗೆ ತಾವು ನೂತನವಾಗಿ ಆಯುಕ್ತರಾಗಿ ಆಗಮಿಸಿದ್ದಕ್ಕೆ ನಗರವು ಅಭಿವೃದ್ದಿ ಆಗುವುದು ಎಂಬ ಬಯಕೆಯನ್ನು ನಗರದ ಜನತೆಯಲ್ಲಿ ಮೂಡಿದೆ. ಆದ್ದರಿಂದ ಪಾಲಿಕೆಯ ಆಡಳಿತ ಯಂತ್ರವು ಈ ಹಿಂದೆ ಕುಸಿದಿತ್ತು.
ಪ್ರಸ್ತುತ ನೂತನ ಆಯುಕ್ತರ ನೇತೃತ್ವದ ಆಡಳಿತ ಯಂತ್ರವನ್ನು ಎಲ್ಲಾ ಶಾಖೆಗಳ ಅಧಿಕಾರಿಗಳ, ಸಿಬ್ಬಂದಿಗಳ ಆಡಳಿತ ಯಂತ್ರವನ್ನು ಆಯುಕ್ತರ ಅಧಿಕಾರವಧಿಯಲ್ಲಿ ಪಾರದರ್ಶಕವಾಗಿ ಬಲವರ್ಧನೆಗೊಳಿಸಬೇಕು ಮತ್ತು ಸಾರ್ವಜನಿಕರಿಗೆ ಸದರಿ ಪಾಲಿಕೆಯ ವತಿಯಿಂದ ಮತ್ತು ಸರಕಾರದ ವತಿಯಿಂದ ದೊರಕುರ ಎಲ್ಲಾ ತರಹದ ಸೌಕರ್ಯಗಳನ್ನು ಮತ್ತು ಮೂಲ ಸೌಕರ್ಯಗಳನ್ನು ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಸಕಾಲದಲ್ಲಿ ಕಾರ್ಯಗಳನ್ನು ಕಾರ್ಯಗೊಳಿಸಲು ಸಂಬಂಧಿಸಿದ ಎಲ್ಲಾ ಶಾಖೆಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಒಂದು ಸಭೆಯನ್ನು ಕರೆದು ಕಟ್ಟುನಿಟ್ಟಾಗಿ ಆದೇಶಿಸಬೇಕೆಂದು ಮನವಿಯನ್ನು ತಿಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಜುಕುಮಾರ ಮಾಳಗೆ, ಪ್ರಶಾಂತ ಬಾಪುನಗರ, ಅಮರ ಯಾದವ, ಸಾಗರ ಮೆಲೋಡಿಸ್, ಶಾಂತಕುಮಾರ ಎಸ್.ಕೆ. ರಿತೇಶ ಮುಗನೂರ, ಆನಂದ ಕೇಶ್ವರ, ಇನ್ನೂ ಹಲವಾರು ಕಾರ್ಯಕರ್ತಗಳು ಇದ್ದರು.