ಬೂದಿಹಾಳದಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ ದಲಿತ ಸೇನೆ ಪ್ರತಿಭಟನೆ

0
64

ಸುರಪುರ: ಭಾರತ ದೇಶದಲ್ಲಿನ ಎಲ್ಲರು ಸಮಾನತೆ ಮತ್ತು ಸೌಹಾಧತೆಯಿಂದ ಬದುಕಬೇಕೆಂಬ ಸದಾಶಯದೊಂದಿಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ಎಲ್ಲರು ಅರಿಯಬೇಕಿದೆ.ಇದನ್ನು ಮರೆತು ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿನ ದಲಿತ ಯುವ ಮುಖಂಡ ಅನಿಲ್ ಇಂಗಳಗಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ದಲಿತ ಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದು ದಲಿತ ಸೇನೆ ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯಿಂದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ, ಬೂದಿಹಾಳ ಗ್ರಾಮದಲ್ಲಿನ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತನೆಂಬ ಕಾರಣಕ್ಕಾಗಿ ಅನಿಲ್ ಇಂಗಳಗಿಯನ್ನು ಹತ್ಯೆ ಮಾಡಿರುವುದು ಘೋರ ಅಪರಾಧವಾಗಿದ್ದು ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ನೀಡಬೇಕು ಮತ್ತು ಹತ್ಯೆಗೀಡಾದ ಯುವಕನ ಕುಟುಂಬಕ್ಕೆ 5 ಎಕರೆ ಜಮೀನು ನೀಡಬೇಕು.25 ಲಕ್ಷ ಪರಿಹಾರ ನೀಡಬೇಕು ಹಾಗು ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು.ಇಲ್ಲವಾದಲ್ಲಿ ದಲಿತ ಸೇನೆ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಹುಲಗಪ್ಪ ದೇವತ್ಕಲ್ ಸುಭಾಷ ತೇಲ್ಕರ್ ಮಾನಪ್ಪ ಝಂಡದಕೇರಾ ತಾಯಪ್ಪ ಕನ್ನೆಳ್ಳಿ ಮೌನೇಶ ಹುಣಸಿಹೊಳೆ ನಾಗು ಗೋಗಿಕೇರಾ ಶಿವಣ್ಣ ನಾಗರಾಳ ಪ್ರಕಾಶ ಕೆಂಭಾವಿ ಶಿವಶಂಕರ ಗೋನಾಲ ಗೋಪಾಲ ರಾಚೂರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here