ಕಲಬುರಗಿ: ವಾಡಿ ಪಟ್ಟಣ ಪುರಸಭೆ ಎರಡನೇ ಅವಧಿ ಅಧ್ಯಕ್ಷರಾಗಿ ಝರೀನಾ ಬೇಗಂ ಅವರು ಅವೀರೋಧ ಆಯ್ಕೆಯಾಗಿದ್ದಾರೆ. ಹಾಗೂ ಉಪಾಧ್ಯಕ್ಷರಾಗಿ ತಿಮ್ಮಯ್ಯ ಪವಾರ್ ಅವರು ಆಯ್ಕೆಯಾಗಿದ್ದಾರೆ.
ವಾಡಿ ಪುರಸಭೆ ಮತ್ತೆ ಕಾಂಗ್ರೇಸ್ ತೆಕ್ಕೆಗೆ ಜಾರಿದೆ. ಪುರಸಭೆಯ 23 ಸ್ಥಾನಗಳಲ್ಲಿ 13ಕಾಂಗ್ರೇಸ್, 8 ಬಿಜೆಪಿ ಹಾಗೂ 02 ಪಕ್ಷೇತರ ಸದಸ್ಯರಿದ್ದಾರೆ.
ಅಧ್ಯಕ್ಚ ಸ್ಥಾನವನ್ನು ಹಿಂದುಳಿದ ವರ್ಗ(ಎ) ಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮಿಸಲಿಡಲಾಗಿತ್ತು. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ(ಎ) ಅಭ್ಯರ್ಥಿ ಇಲ್ಲದ ಕಾರಣ ನಾಮಪತ್ರ ಸಲ್ಲಿಸಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೆ ಐದು ಜನ ಆಕಾಂಕ್ಷಿಗಳಿದ್ದರು ಸಹ ಶಾಸಕ ಪ್ರೀಯಾಂಕ್ ಖರ್ಗೆ ನಿರ್ದೇಶನ ಮೇರೆಗೆ ಕಾಂಗ್ರೇಸ್ ನ ಎಲ್ಲಾ ಸದಸ್ಯರು ವಾರ್ಡ ನಂ.12ರ ಸದಸ್ಯೆ ಝರೀನಾ ಬೇಗಂ ಅವರನ್ನೂ ಬೆಂಬಲ ಸೂಚಿಸಿದ ಹಿನ್ನೆಲೆ ಅವೀರೊಧ ಆಯ್ಕೆ ಮಾಡಲಾಗಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶೋಭಾ ಪವಾರ ನಾಮಪತ್ರ ಸಲ್ಲಿಸಿದರೆ ಕಾಂಗ್ರೇಸ್ ಪಕ್ಷದಲ್ಲಿ ಹಲವು ಜನ ಅರ್ಹ ಅಭ್ಯರ್ಥಿಗಳಿದ್ದರು ಸಹ ವಾರ್ಡ ನಂ 23ರ ಸದಸ್ಯ ತಿಮ್ಮಯ್ಯ ಪವಾರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದರಿಂದ ಕಾಂಗ್ರೆಸ್ 13ಮತಗಳು ಪವಾರ್ ಪಾಲಾದವು, ಇನ್ನೂ ಬಿಜೆಪಿಯ ಶೋಭಾ ಪವಾರ್ ಅವರಿಗೆ ಬಿಜೆಪಿಯಎಂಟು ಮತ ಪಡೆದುಕೊಂಡರು.
ಕಾಂಗ್ರೇಸ್ ನ ಪಕ್ಷದಲ್ಲೆ ದೇವೇಂದ್ರ ಕರದಳ್ಳಿ ಹಾಗೂ ತಿಮ್ಮಯ್ಯ ಪವಾರ್ ನಡುವೆ ಹಗ್ಗಾಜಗ್ಗಾಟ ಏರ್ಪಟಿದ್ದಾದರು. ಕೊನೆಗೆ ಪಕ್ಷದ ನಿರ್ಣಾಯಕ್ಕೆ ಸರ್ವ ಸದಸ್ಯರು ತಿಮ್ಮಯ್ಯ ಪವಾರ್ ಅವರಿಗೆ ಬೆಂಬಲ ಸೂಚಿಸಿದರು.