ಸಮುದಾಯದ ನ್ಯಾಯಕ್ಕಾಗಿ ಸಭಾತ್ಯಾಗ: ಶಾಸಕ ಡಾ. ಅಜಯ್ ಸಿಂಗ್

0
907

ಕಲಬುರಗಿ: ತಳವಾರ, ಪರಿವಾರ ಸಮುದಾಯಗಳ ನ್ಯಾಯಕ್ಕಾಗಿ ಸಭಾತ್ಯಾಗಕ್ಕೂ ಸಿದ್ಧ ಎಂದ ಜೇವರ್ಗಿ ಶಾಸಕ ಡಾಕ್ಟರ್ ಅಜಯ್ ಸಿಂಗ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ತಳವಾರ ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಏಳನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕೆ ಬೆಂಬಲ ಸೂಚಿಸಿ ಮಾತನಾಡಿದವರು ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ರಾಷ್ಟ್ರಪತಿಯವರ ಅಂಕಿತದೊಂದಿಗೆ ಕೇಂದ್ರ ಸರಕಾರ ಅನುಮೋದಿಸಿ ಆದೇಶ ಹೊರಡಿಸಿದರು.

Contact Your\'s Advertisement; 9902492681

ರಾಜ್ಯ ಸರಕಾರ ಈ ಸಮುದಾಯಗಳಿಗೆ ನೀಡಬೇಕಾದ ಸೌಲಭ್ಯವನ್ನು ನೀಡದೆ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದೆ. ಸಮಾಜಕಲ್ಯಾಣ ಸಚಿವರಾದಂತಹ ಗೋವಿಂದ ಕರ್ಜೋಳ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹಾಗೆ ರಾಜ್ಯ ಸರಕಾರ ಕೂಡ ತನ್ನ ಮನಸ್ಸಿಗೆ ಬಂದಂತೆ ದಿನಕ್ಕೊಂದು ಆದೇಶಗಳನ್ನು ಹೊರಡಿಸುತ್ತಿದೆ.

ಇದರಲ್ಲಿ ಯಾವುದೇ ಗೊಂದಲ ಬೇಡ ಬಹಳ ಸ್ಪಷ್ಟವಾಗಿದೆ. 2014ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ನಾಯ್ಕಾಡ್, ನಾಯಕ, ಸಿದ್ದಿ ಪರಿವಾರ ಮತ್ತು ಇದರಲ್ಲಿರುವ ಏಕೈಕ ಏಕೈಕ ಪದವಾದ ತಳವಾರ, ತಳವಾರಭೋಯ್ ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು.

ಅದರಂತೆ ಈಗ ಕೇಂದ್ರ ಸರಕಾರ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದೆ. ಅದರಂತೆ ರಾಜ್ಯ ಸರಕಾರವು ಕೂಡ ಈ ಎಲ್ಲಾ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ನೀಡಿದೆ.

ಆದರೆ ಈಗ ಗೋವಿಂದ ಕಾರಜೋಳ ಅವರ ಮಾತು ಕೇಳಿಕೊಂಡು ರಾಜ್ಯ ಸರಕಾರ ತಳವಾರ, ಪರಿವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದೆ ಅನ್ಯಾಯವಾಗುತ್ತಿದೆ.

ಸರಕಾರದ ಈ ನಡೆಯಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚನೆ ಮಾಡಿರುವಂತಹ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ.

ಈ ಸಮುದಾಯಗಳಿಗೆ ನ್ಯಾಯ ಕೊಡಿಸುವುದರ ಮುಖಾಂತರ ನಾವು ಸಂವಿಧಾನ ರಕ್ಷಣೆ ಮಾಡುತ್ತೇವೆ. ಒಂದು ವೇಳೆ ಸರಕಾರ ಇದರಲ್ಲಿ ಏನಾದರೂ ಮೀನಾಮೇಷ ಎಣಿಸಿದರೆ ವಿರೋಧಪಕ್ಷದವರಾದ ನಾವು ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದಲ್ಲಿ ತ್ಯಾಗ ಮಾಡುತ್ತೇವೆ.

ಈ ಸಂದರ್ಭದಲ್ಲಿಡಾ.ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ, ರೇವಣಸಿದ್ದಪ್ಪಗೌಡ ಕಮಾನಮನಿ, ಬಸವರಾಜ್ ಬೂದಿಹಾಳ, ದೇವೇಂದ್ರ ಚಿಗರಳ್ಳಿ , ಚಂದ್ರಶೇಖರ ಜಮಾದಾರ ವಕೀಲರು, ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here