ಭಜಂತ್ರಿ, ಹೊಸಮನಿ ವಿರುದ್ಧ ರೈತ ಸಂಘದಿಂದ ಆಕ್ರೋಶ

0
69

ಜೇವರ್ಗಿ: ಯಡ್ರಾಮಿ ತಾಲ್ಲೂಕಿನ ದಕ್ಷ ದಂಡಾಧಿಕಾರಿಗಳಾದ ಬಸಲಿಂಗಪ್ಪ ನಾಯ್ಕೋಡಿ ರವರ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಶೋಭೆಯಲ್ಲ. ಕೋಟ್ಯಾಂತರ ರೂಪಾಯಿ ಮೌಲ್ಯದ ಸರಕಾರಿ ಆಸ್ತಿಯನ್ನು ಉಳಿಸಿಕೋಳ್ಳಲು ಹಗಲಿರುಳು ಶ್ರಮೀಸುತ್ತಿರುವ ತಹಸೀಲ್ದಾರರ ವಿರುದ್ದ ಆರೋಪ ಮಾಡುತ್ತಿರುವ ಭಜಂತ್ರಿ ಮತ್ತು ಹೋಸಮನಿ ಎಂಬ ಪುಣ್ಯಾತ್ಮರು 420 ಗಳು ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಗಂವಾರ ರವರು ಗಂಭೀರವಾಗಿ ಆರೋಪಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೇಸಿ ಮಾತನಾಡಿದ ಮಲ್ಲಿಕಾರ್ಜುನ ಗಂವಾರ ರವರು, ರೈತ ಸಂಘದ ಮುಖಂಡರಾದ ಈರಣ್ಣ ಭಜಂತ್ರಿ ಎಂಬುವರು ಮೂಲತಃ ವಿಜಾಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೋನ್ನಳ್ಳಿ ಗ್ರಾಮದವರು. ಇವರು ಹೋನ್ನಳ್ಳಿ ಗ್ರಾಮದಲ್ಲಿ 3.26ಎಕರೆ ಗುಂಟೆ ಸರಕಾರಿ ಜಮಿನು ತಮ್ಮ ಕುಟುಂಬದವರ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ.

Contact Your\'s Advertisement; 9902492681

ಯಡ್ರಾಮಿ ತಾಲ್ಲೂಕಿನ ಬಿರಾಳ ಹಿಸ್ಸಾ ಗ್ರಾಮಲ್ಲಿ 3.25ಎಕರೆ ಸರಕಾರಿ ಜಮಿನು ಅವರ ಕುಟುಂಬದವರ ಹೆಸರ ಮೇಲೆ ಭಜಂತ್ರಿಯವರು ಮಾಡಿಕೊಂಡಿರುತ್ತಾರೆ ಸದರಿಯವರಿಗೆ ಪಿತ್ರಾರ್ಜಿತ ಆಸ್ತಿಯಾಗಿ 7ಎಕರೆ ಜಮಿನು ಹೋನ್ನಳ್ಳಿ ಗ್ರಾಮದಲ್ಲಿತ್ತು. ಅದು ಈಗ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಇದೆ.ಆದರೆ ಕೇವಲ 4ಎಕರೆ ಪಟ್ಟಾ ಜಮಿನು ಹೊಂದಿದ್ದರೆ, ಇವರು ಸರಕಾರದ ಜಮೀನು ಯಾವ ಕುತುಂತ್ರ ನಿತಿಯನ್ನು ಅನುಸರಿಸಿ ಮಾಡಿಕೊಂಡಿದ್ದಾರೆ ಎಂಬುವುದೆ ಯಕ್ಷ ಪ್ರಶ್ನೆ ಎಂದು ಗಂವಾರ ಅವರು ಭಜಂತ್ರಿ ವಿರುದ್ದ ಕೀಡಿ ಕಾರಿದರು.

ಅಲ್ಲದೆ ಈರಣ್ಣ ಭಜಂತ್ರಿಯವರು ಯಡ್ರಾಮಿ ಪಟ್ಟಣದ ಸರ್ವೆ ನಂ 442 ಸರಕಾರಿ ಆಸ್ತಿಯಲ್ಲಿ ಮನೆ ಸಹ ಮಾಡಿಕೊಂಡಿದ್ದಾರೆ ಹಾಗೂ ಕೃಷಿ,ತೋಟಗಾರಿಕೆ ಇಲಾಖೆಯಿಂದ ಸರಕಾರಿ ಸೌಲಭ್ಯವನ್ನು ಸಿಂದಗಿ ಹಾಗೂ ಯಡ್ರಾಮಿಯಲ್ಲಿ ಪಡೆದುಕೊಂಡಿದ್ದಾರೆ. ಭಜಂತ್ರಿಯವರ ವಿರುದ್ದ 192ಹಾಗೂ 420 ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ ಇಂತಹ ವ್ಯಕ್ತಿ ದಕ್ಷ ಅಧಿಕಾರಿ ಬಸಲಿಂಗಪ್ಪ ನಾಯ್ಕೋಡಿ ಅವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಇನ್ನೋರ್ವ ರೈತ ಮುಖಂಡರಾದ ಸುಭಾಷ ಹೋಸಮನಿ ಎಂಬುವರು 15-16ಎಕರೆ ಆಸ್ತಿ ಹಾಗೂ ಇಬ್ಬರು ಹೆಂಡತಿ ಹೊಂದಿರುವ ಹೋಸಮನಿರವರು, ಪತ್ನಿಯರ ಹೆಸರುಗಳಲ್ಲಿ ಅಂಗವಿಕಲ ಹಾಗೂ ವೃಧಾಪ್ಯ ವೇತನದ ಪಿಂಚಣಿ ಪಡೆಯುತ್ತಿದ್ದಾರೆ. ಹಾಗೂ ತಾಯಿಯ ಹೆಸರಿನಲ್ಲಿ ಮತ್ತು ಹೋಸಮನಿಯವರೆ ಸ್ವತಹ ಅಂಗವಿಕಲ ವೇತನವನ್ನು ಪಡೆದುಕೋಳ್ಳುತ್ತಿದ್ದಾರೆ ಎಂದು ಹೇಳಿದ ಅವರು, 15ಎಕರೆ ಆಸ್ತಿ ಇದ್ದರು ಸರಕಾರದ ಸೌಲಭ್ಯ ಪಡೆಯಲು ಅರ್ಹ ಇರುವುದಿಲ್ಲ. ಆದ್ದರಿಂದ ಈ ಹಿಂದೆ ಇದ್ದ ಜೇವರ್ಗಿಯ ತಹಸೀಲ್ದಾರರು ಇಲ್ಲಿಯವರೆಗೆ ಪಡೆದುಕೊಂಡಂತಹ 8ಲಕ್ಷ ರೂಪಾಯಿ ಮರಳಿ ಸರಕಾರಕ್ಕೆ ಕಟ್ಟಬೇಕೆಂದು ಇವರ ವಿರುದ್ದ ಸಹ ಪ್ರಕರಣ ದಾಖಲಾಗಿದೆ ಹಾಗಾಗಿ ಇವರಿಗೆ 420ಎನ್ನದೆ ಮತ್ತೇನು ಹೇಳಬೆಕೆಂದು ಅವರುಗಳ ವಿರುದ್ದ ಮಲ್ಲಿಕಾರ್ಜುನ ಗಂವಾರ ರವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷರಾದ ಅಲಿಸಾಬ ಭಗರಿಕರ್, ಶಾಂತಯ್ಯ ಸ್ಥಾವರ ಮಠ, ಮಲ್ಲಿಕಾರ್ಜುನ ಪೂಜಾರಿ, ಕಾಶಿನಾಥ ಪಾಪಿ, ಹಳೆಪ್ಪ ನಾಟಿಕಾರ, ಸಂಗನಗೌಡ ಪಾಟೀಲ್, ಜೆಟ್ಟೆಪ್ಪ ಇಜೇರಿ, ಮರೆಪ್ಪ ಕಡಕೊಳ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here