ವಿದ್ಯಾಗಮ ಯೋಜನೆ ಸಫಲಗೊಳಿಸಲು ಶಿಕ್ಷಕರು ಮುಂದಾಗಿ- ವೆಂಕಟರೆಡ್ಡಿ

0
166

ಶಹಾಬಾದ:ಶಿಕ್ಷಕರು ಮಕ್ಕಳನ್ನು ನಿರಂತರ ಕಲಿಕೆಗೆ ಹಚ್ಚುವ ಸಲುವಾಗಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗವಾಗಿ ವಿದ್ಯಾಗಮ ಜಾರಿಗೆ ತಂದಿದ್ದು, ಶಿಕ್ಷಕರು ಈ ಯೋಜನೆಯನ್ನು ಯಶಸ್ವಿಗೊಳಿಸವಲ್ಲಿ ಮುಂದಾಗಬೇಕೆಂದು ಶಿಕ್ಷಣ ಸಂಯೋಜಕ ವೆಂಕಟರೆಡ್ಡಿ ಹೇಳಿದರು.

ಅವರು ಬುಧವಾರ ನಗರದ ಶಿವಯೋಗೇಶ್ವರ ಪ್ರೌಢಶಾಲೆಯ ಮಕ್ಕಳನ್ನು ನಿಜಾಮ ಬಜಾರನ ಸಮುದಾಯ ಭವನದಲ್ಲಿ ಹಾಗೂ ಬಸವೇಶ್ವರ ನಗರದ ಬಸವಣ್ಣನ ಗುಡಿಯಲ್ಲಿ ನಡೆಸುತ್ತಿರುವ ವಠಾರ ಶಾಲೆಗೆ ಬೇಟಿ ನೀಡಿ ಮಾತನಾಡಿದರು.

Contact Your\'s Advertisement; 9902492681

ಕೋವಿಡ್-19 ದಿಂದ ಸುಮಾರು ಮೂರು ತಿಂಗಳು ಶಾಲಾ ತರಗತಿಗಳು ನಡೆಯುತ್ತಿಲ್ಲ.ಇದರಿಂದ ಮಕ್ಕಳು ಅಭ್ಯಾಸದಿಂದ ವಂಚಿತರಾಗುತ್ತಿರುವುದರಿಂದ ಅವರು ಕಲಿಕೆಯಲ್ಲಿ ತೊಡಗುವಂತೆ ಮಾಡಲು ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ತಂದಿದ್ದು, ಶಿಕ್ಷಕರು ಮಕ್ಕಳಿರುವ ಸ್ಥಳಕ್ಕೆ ಹೋಗಿ ಪಾಠ ಹೇಳತಕ್ಕದ್ದು.ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ ಧರಿಸಲು ಶಿಕ್ಷಕರು ಸಲಹೆ ನೀಡಬೇಕು.ಮಕ್ಕಳಿಗೆ ಸಾಮನ್ಯ ಜ್ಞಾನ ಹಾಗೂ ಕಲಿಕಾ ಸಾಮಥ್ಯವನ್ನು ಹೆಚ್ಚಿಸುವ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.

ಶಿಕ್ಷಣ ಸಂಯೋಜಕ ರವೀಂದ್ರ ರಾಠೋಡ ಮಾತನಾಡಿ, ವಠಾರ ಶಾಲೆಗೆ ಬರದ ಮಕ್ಕಳನ್ನು ಪೋಷಕರಿಗೆ ತಿಳಿಸಿ ಬರುವಂತೆ ಪ್ರೇರೇಪಿಸಿ ಎಂದು ಹೇಳಿದರು. ಅಲ್ಲದೇ ನಂತರ ಮಕ್ಕಳ ಜತೆಗೆ ಸಾಮನ್ಯ ಜ್ಞಾನ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದರು.ಅಲ್ಲದೇ ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ  ಶಿಕ್ಷಕ ಗಣೇಶ ಜಾಯಿ, ಮಹೇಂದ್ರ ಹಾಗೂ ಶಾಲಾ ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here