ಜೇವರ್ಗಿ: ಜೇವರ್ಗಿ ಪಟ್ಟಣ ಸೇರಿದಂತೆ ಕಟ್ಟಿಸಂಗವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸಮಯ ಸಮಸ್ಯೆಯನ್ನು ನೀಗಿಸು ಬ್ರಿಜ್ಜಿನ ಕಾಮಗಾರಿ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕರಾದ ತಿಳಿಸಿದರು.
ಇಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರು ವೆಂಟೆಡ್ ಡ್ಯಾಮ್ ಹಾಗೂ ಬ್ಯಾರೇಜ್ ಕಂ ಬ್ರಿಡ್ಜ್ ನ ನಿರ್ಮಾಣದಿಂದಾಗಿ ಕುಡಿಯುವ ನೀರು ಸೇರಿದಂತೆ ರೈತರ ಹೊಲಗಳಿಗೆ ವ್ಯವಸಾಯಕ್ಕಾಗಿ ಅತಿ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಸರಕಾರದ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ನಗರೋತ್ಥಾನ ಯೋಜನೆ ಅಡಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ವೀಕ್ಷಣೆಯ ಸಮಯದಲ್ಲಿ ಹಿರಿಯ ಮುಖಂಡರಾದ ರಾಜಶೇಖರ ಸೀರಿ ,ಕಾಶಿರಾಯ ಗೌಡ ಯಲಗೋಡ, ಮೊಹಮ್ಮದ್ ನೂರಿ ,ನೀಲಕಂಠ ಆವಂಟಿ, ರವೀಂದ್ರ ಕೋಳಕೂರ, ದೇವಿಂದ್ರ ಕಟ್ಟಿಸಂಗಾವಿ, ಪರಶುರಾಮ ಪಾಟೀಲ, ಇಲಾಖೆಯ ಮಧುಸೂದನ್ ತಿಮ್ಮಪುರ್ ಸೇರಿದಂತೆ ಇತರರು ಭಾಗವಹಿಸಿದ್ದರು.