ಕಲಬುರಗಿ: ತಳವಾರ, ಪರಿವಾರ ಸಮುದಾಯಗಳಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ಹೀಗೆ ಶಾಂತಿಯುತವಾಗಿ ನಡೆಯಲಿ, ಒಂದು ವೇಳೆ ನ್ಯಾಯ ಸಿಗದಿದ್ದರೆ ನಿಮ್ಮಿಂದ ಕ್ರಾಂತಿಯಾಗಲಿ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ 10ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಯುವ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರಕಾರ ನಮಗೆ ಕೊಟ್ಟಂತ ಸೌಲಭ್ಯವನ್ನು ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಕಿತ್ತಿಕೊಂಡು ನಮಗೆ ವಂಚಿಸುತ್ತಿದೆ.
2014ರಲ್ಲಿ ರಾಜ್ಯ ಸರಕಾರ ಕಳುಸಿ ಕೊಟ್ಟಂತೆ 88h ನಲ್ಲಿರುವ ತಳವಾರ, ತಳವಾರಬೋಯಾವನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ ರಾಷ್ಟ್ರಪತಿಯವರ ಅಂಕಿತದೊಂದಿಗೆ ಜಾರಿಮಾಡಿದೆ.
ಆದರೆ ಇಲ್ಲಿ ರಾಜ್ಯ ಸರ್ಕಾರ ಇನ್ಯಾರದೋ ಹಿತ ಕಾಪಾಡುವುದಕ್ಕಾಗಿ ನಮ್ಮನ್ನು ತುಳಿಯುತ್ತಿದೆ. ಸರ್ಕಾರದ ಈ ನಡೆಯಿಂದ ತಳವಾರ, ಪರಿವಾರ ಸಮುದಾಯಗಳಿಗೆ ಸಾಂವಿಧಾನಿಕ ಅನ್ಯಾಯವಾಗುತ್ತಿದೆ. ನಮಗಾದ ಅನ್ಯಾಯವನ್ನು ಖಂಡಿಸಿ ಸಾಮಾಜಿಕ ನ್ಯಾಯದಡಿಯಲ್ಲಿ ನಮ್ಮ ಹಕ್ಕಿಗಾಗಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ. ಈಗಲಾದರೂ ಸರ್ಕಾರ ಬೇಗನೆ ಎಚ್ಚೆತ್ತುಕೊಂಡು ನಮಗೆ ಸಿಗಬೇಕಾದ ಸಾಮಾಜಿಕ ನ್ಯಾಯವನ್ನು ಕೊಡಬೇಕು. ಒಂದು ವೇಳೆ ನಮ್ಮ ಶಾಂತಿಯುತವಾದ ಹೋರಾಟವನ್ನು ಪರೀಕ್ಷಿಸುವ ಕೆಲಸ ಮಾಡಿ ನಮ್ಮನ್ನು ಕ್ರಾಂತಿಗೆ ಪ್ರೇರೇಪಿಸ ಬೇಡಿ.
ನಮಗೆ ಸಿಗಬೇಕಾದ ನ್ಯಾಯವನ್ನು ಸಿಗುವವರೆಗೆ ಈ ಹೋರಾಟ ನಿಲ್ಲುವುದಿಲ್ಲ. ಸುಖಾಸುಮ್ಮನೆ ಜಿಲ್ಲಾ ಆಡಳಿತ ನಮ್ಮ ಶಾಂತಿಯುತ ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಒತ್ತಡ ಹೇರುತ್ತಿದೆ. ಹೋರಾಟ ನಿರತರ ಮೇಲೆ ಕೋವಿಡ್ 19 ವಿಪತ್ತು ನಿರ್ವಹಣೆ ಅಡಿಯಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಭಯ ಹಾಕುತ್ತಿದ್ದಾರೆ.
ನಮಗೆ ನ್ಯಾಯ ಸಿಗುವವರೆಗೆ ಯಾವತ್ತು ಧರಣಿ ಸತ್ಯಾಗ್ರಹದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ. ಒತ್ತಾಯ ಮೇರೆಗೆ ಏನಾದರೂ ಧರಣಿ ಸತ್ಯಹಗ್ರದಿಂದ ಎಬ್ಬಿಸುವ ಪ್ರಯತ್ನ ನಡೆದರೆ ರಾಜ್ಯದ ತುಂಬಾ ಕ್ರಾಂತಿಯ ಅಲೆ ಎಳುತ್ತದೆ. ಅದರ ಪರಿಣಾಮದ ನೇರವಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರವೇ ಹೋರಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ಕಣಮೇಶ್ವರ, ಮಾಜಿ ಜಿಲ್ಲಾ ಅಧ್ಯಕ್ಷರು ಸೇವಾ ಸಂಘ, ಸುರೇಶಗೌಡ ಪಾಟೀಲ್, ಭೀಮಣ್ಣ ಕೌವಲಗಿ, ಧರ್ಮರಾಜ್ ವಾಲಿಕಾರ್, ಗೊಲ್ಲಾಳಪ್ಪ ಗೌಡ ಪಾಟೀಲ್ ಗೋಲಗೇರಿ, ಯಲ್ಲಪ್ಪ ನಾಯ್ಕೋಡಿ, ಸಾಯಿಬಣ್ಣ ಬಾಗೇವಾಡಿ ಜೆಡಿಎಸ್ ತಾಲೂಕ ಅಧ್ಯಕ್ಷರು ದೇವರ ಹಿಪ್ಪರಗಿ, ಆಕಾಶ ಬೂದಿಹಾಳ, ಇರ ಗಂಟೆಪ್ಪ, ರತ್ನಬಾಯಿ ಸಿದ್ದಣ್ಣ, ಸುನೀತಾ ಎಂ ತಳವಾರ್, ಮಲ್ಲಿಕಾರ್ಜುನ ಮುಕ್ಕಾ, ಯಮನಪ್ಪ ತಡಕಲ್, ಅಳ್ಳೆಪ್ಪ ನಾಟಿಕಾರ್, ರಮೇಶ್ ನಾಟಿಕರ್,ಡಾ.ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ, ರಾಚಣ್ಣ ಯಡ್ರಾಮಿ, ದೇವೇಂದ್ರ ಚಿಗರಳ್ಳಿ , ಚಂದ್ರಶೇಖರ ಜಮಾದಾರ ವಕೀಲರು, ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.