ಕಲಬುರಗಿ: ಡೇ-ನಲ್ಮ್ (ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ) ಸಿ.ಎಲ್.ಎಫ್. ಉತ್ತರದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂ. 1 ರಿಂದ 30 ಹಾಗೂ ವಾರ್ಡ ಸಂ. 32ರ ಫಲಾನುಭವಿಗಳಿಗೆ 2018-19ನೇ ಸಾಲಿನಲ್ಲಿ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ವಿವಿಧ ಸರ್ಕಾರಿ ಸೌಮ್ಯದ ತರಬೇತಿ ಸಂಸ್ಥೆಗಳ ಮೂಲಕ ಕೆಳಕಂಡ ಕೋರ್ಸ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ (ಎಸ್.ಎಸ್.ಸಿ./ಕ್ಯೂ ೨೨೧೩) ಬಯೋಮೆಟ್ರಿಕ್ ಕೋರ್ಸಿಗೆ, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ (ಎಸ್.ಎಸ್.ಸಿ./ಕ್ಯೂ ೨೨೧೨), ಅಸಿಸ್ಟೆಂಟ್ ಎಸ್.ಪಿ.ಎ. ಥೆರಪಿಸ್ಟ್, ಬ್ಯೂಟಿ ಥೆರಪಿಸ್ಟ್, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಡೊಮೆಸ್ಟಿಕ್ ಬಯೋಮೆಟ್ರಿಕ್ ಡಾಟಾ ಆಪರೇಟರ್ ಹುದ್ದೆಗಳಿಗೆ ಹತ್ತನೇ ತರಗತಿ ಪಾಸಾಗಿರಬೇಕು.
ಡೊಮೆಸ್ಟಿಕ್ ಆಯ್.ಟಿ. ಹೆಲ್ಪ್‌ಡಿಸ್ಕ್ ಅಟೆಂಡೆಂಟ್, ಜ್ಯೂನಿಯರ್ ಸಾಫ್ಟವೇರ್ ಡೆವಲಪರ್ ಹಾಗೂ ಡೊಮೆಸ್ಟಿಕ್ ಆಯ್.ಟಿ. ಹೆಲ್ಪ್‌ಡಿಸ್ಕ್ ಅಟೆಂಡೆಂಟ್ ಕೋರ್ಸುಗಳಿಗೆ ಪಿಯುಸಿ (12ನೇ ತರಗತಿ) ಪಾಸಾಗಿರಬೇಕು. ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ.) ಅಕೌಂಟ್ಸ್ ಅಸಿಸ್ಟೆಂಟ್ ಕೋರ್ಸಿಗೆ ವಾಣಿಜ್ಯದಲ್ಲಿ ಪದವಿ ಅಥವಾ ಅಲೈಡ್ ವಿಷಯಗಳು/ ಡಿಪ್ಲೋಮಾ ಇನ್ ಕಮರ್ಶಿಯಲ್ ಪ್ರಾಕ್ಟಿಸ್ ವಿದ್ಯಾರ್ಹತೆ ಹೊಂದಿರಬೇಕು.
ಅಸಿಸ್ಟೆಂಟ್ ಹೇರ್ ಸ್ಪೇಷಾಲಿಸ್ಟ್ ಕೋರ್ಸಿಗೆ ಎಂಟನೇ ತರಗತಿ ಪಾಸಾಗಿರಬೇಕಲ್ಲದೇ ಓದಲು ಮತ್ತು ಬರೆಯಲು ಬರಬೇಕು ಮತ್ತು ತರಬೇತಿಯ ಬಗ್ಗೆ ಜ್ಞಾನ ಹೊಂದಿರಬೇಕು. ಸೆಲ್ಫ್ ಎಂಪ್ಲಾಯಡ್ ಟೇಲರ್ ಕೋರ್ಸಿಗೆ ಎಂಟನೇ ತರಗತಿ ಪಾಸಾಗಿರಬೇಕು. ಸಿವಿಂಗ್ ಮಶೀನ್ ಆಪರೇಟರ್ ಕೋರ್ಸಿಗೆ ಐದನೇ ತರಗತಿ ಪಾಸಾಗಿರಬೇಕು. ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ (ಜಿ.ಎಸ್.ಟಿ.) ಅಕೌಂಟ್ಸ್ಸ ಅಸಿಸ್ಟೆಂಟ್ ಕೋರ್ಸಿಗೆ ವಾಣಿಜ್ಯದಲ್ಲಿ ಪದವಿ ಅಥವಾ ಅಲೈಡ್ ವಿಷಯಗಳು/ ಡಿಪ್ಲೋಮಾ ಇನ್ ಕಮರ್ಶಿಯಲ್ ಪ್ರಾಕ್ಟಿಸ್ ವಿದ್ಯಾರ್ಹತೆ ಹೊಂದಿರಬೇಕು.
ವಿವಿಧ ಕೋರ್ಸುಗಳಲ್ಲಿ ಒಟ್ಟು ೨೬೭ ಫಲಾನುಭವಿಗಳಿಗೆ ತರಬೇತಿ ನೀಡುವ ಗುರಿ ಇರುತ್ತದೆ. ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಡೇ-ನಲ್ಮ್ ಸಿ.ಎಲ್.ಎಫ್. ಉತ್ತರ ಶಾಖೆಯಿಂದ ೨೦೧೯ರ ಜೂನ್ ೧ ರಿಂದ ಜೂನ್ ೧೦ರೊಳಗಾಗಿ ಪಡೆದು ಭರ್ತಿ ಮಾಡಿ ಅರ್ಜಿಯನ್ನು ಸದರಿ ಶಾಖೆಯಲ್ಲಿ ಜೂನ್ ೨೦ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಶಾಖೆಗೆ ಸಂಪರ್ಕಿಸಲು ಕೋರಲಾಗಿದೆ.