ಬೆಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ನಿಯೋಗವು ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿಧ್ದರಾಮಯ್ಯ ಅವರನ್ನು ಭೇಟಿ ಮಾಡಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಂಘಟನೆಯು ರಚಿಸಿದ ಪ್ರಸ್ತಾಪ ಪ್ರತಿಯನ್ನು ನೀಡಲಾಯಿತು ಮತ್ತು ಮುಂಬರುವ ಅಧಿವೇಶನದಲ್ಲಿ ಶಿಕ್ಷಣ ನೀತಿಯಲ್ಲಿರುವ ಅಪಾಯದ ಬಗ್ಗೆ ಮಾತನಾಡುವಂತೆ ಮನವಿ ಮಾಡಲಾಯಿತು.
ನಿಯೋಗದಲ್ಲಿ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಕಾರ್ಯದರ್ಶಿ ಅಥಾವುಲ್ಲಾ ಪೂಂಜಲ್ ಕಟ್ಟೆ, ಸಮಿತಿ ಸದಸ್ಯರಾದ ಮುಹಮ್ಮದ್ ರಿಯಾಝ್, ಅಲ್ತಾಫ್ ಹೊಸಪೇಟೆ ಮತ್ತು ಇಮ್ರಾನ್ ಪಿಜೆ ಉಪಸ್ಥಿತರಿದ್ದರು.