ಅಯೋಧ್ಯೆ: ರಾಮ ದೇವಾಲಯದ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವ ರಾಮ ಜನ್ಮಭೂಮಿ ಟ್ರಸ್ಟ್‌ನ ಬ್ಯಾಂಕ್ ಖಾತೆಯಿಂದ ಯಾರೋ ಆರು ಲಕ್ಷ ಮೊತ್ತವನ್ನು ಪಡೆದಿರುವ ಆಘಾತಕಾರಿ ಘಟನೆಯೊಂದು ನಡೆದಿರುವುದು ವರದಿಯಾಗಿದೆ.
ಈ ನಿಧಿಯಿಂದ ರಾಮ ದೇವಾಲಯವನ್ನು ನಿರ್ಮಿಸುತ್ತಿದ್ದು, ದೇವಾಲಯವನ್ನು ನೋಡಿಕೊಳ್ಳುತ್ತಿರುವ ರಾಮ್‌ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಯೋಧ್ಯೆ ಪೊಲೀಸರಲ್ಲಿ ಎಫ್ ಐಅರ್ ನಲ್ಲಿ ಟ್ರಸ್ಟ್ ನ ಬ್ಯಾಂಕ್ ಖಾತೆಯಿಂದ ನಕಲಿ ಚೆಕ್ ಬಳಸಿ ಆರು ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಬ್ಯಾಂಕಿನಿಂದ ಕರೆ ಬಂದಾಗ ತನಗೆ ವಂಚನೆಯ ಬಗ್ಗೆ ತಿಳಿದುಬಂದಿದೆ ಎಂದು ಚಂಪತ್ ರಾಯ್ ತಮ್ಮ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಚೆಕ್‌ನಲ್ಲಿ ಟ್ರಸ್ಟಿಯ ಸಹಿ ಕೂಡ ನಕಲಿ ಎಂದು ತೋರುತ್ತಿದೆ ಎಂದು ಹೇಳಿದ ಅವರು, ಅಯೋಧ್ಯೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸದ್ಯಕ್ಕೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಭೂಮಿ ಪೂಜೆಯ ಕೆಲವು ದಿನಗಳ ನಂತರ, ರಾಮ ಜನ್ಮ ಭೂಮಿ ದೇವಸ್ಥಾನ ನಿರ್ಮಾಣದ ಕೆಲಸ ಪ್ರಾರಂಭವಾಗಿದೆ ಎಂದು ಟ್ರಸ್ಟ್‌ನಿಂದ ತಿಳಿಸಲಾಯಿತು. ದೇವಾಲಯದ ನಿರ್ಮಾಣವು ಸುಮಾರು 36-40 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಮುಂಬರುವ ಹಲವು ವರ್ಷಗಳಿಂದ ಭೂಕಂಪ ಮತ್ತು ಅನಾಹುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ದೇವಾಲಯವನ್ನು ಭಾರತದ ಪ್ರಾಚೀನ ನಿರ್ಮಾಣ ವಿಧಾನದಿಂದ ನಿರ್ಮಿಸಲಾಗುತ್ತಿದೆ ಎಂದು ಬಣ್ಣಿಸಲಾಗುತ್ತಿದೆ.