ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಸ್ವಾಮಿತ್ವ ಯೋಜನೆ: ಜಗನ್ನಾಥ ಮೂರ್ತಿ

0
38

ಶಹಾಪುರ: ಗ್ರಾಮೀಣ ಭಾಗದಲ್ಲಿರುವ ಆಸ್ತಿ ಹಕ್ಕಿಗೆ ಸ್ವಾಮಿತ್ವ ಎಂಬ ಮಹತ್ವಾಕಾಂಕ್ಷೆ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ ಈ ಯೋಜನೆಯು ಕರ್ನಾಟಕದಾದ್ಯಂತ ಹಂತ ಹಂತವಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗನ್ನಾಥ ಮೂರ್ತಿ ಹೇಳಿದರು.

ತಾಲ್ಲೂಕಿನ ವನದುರ್ಗ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಸ್ವಾಮಿತ್ವ ಗ್ರಾಮಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಶರಣಬಸವ ಮಾತನಾಡಿ ಪ್ರತಿ ಗ್ರಾಮದಲ್ಲಿರುವ ಆಸ್ತಿಯ ಸರ್ವೆಯನ್ನು ಡ್ರೋನ್ ಮೂಲಕ ನಡೆಸುವುದರಿಂದ ನಕ್ಷೆಯ ನಿಖರವಾದ ಮಾಹಿತಿ ದೊರೆಯಲಿದ್ದು ಆದ್ದರಿಂದ ಆಸ್ತಿ ತೆರಿಗೆ ವಂಚನೆಯನ್ನು ತಡೆಗಟ್ಟಬಹುದು ಅಲ್ಲದೆ ಗ್ರಾಮ ಪಂಚಾಯಿತಿಯ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯ ಮತ್ತು ವಿವಿಧ ಸೌಲಭ್ಯಗಳು ಪಡೆಯಲು ಆಸ್ತಿ ಮಾರಾಟ ಮಾಡಲು ಸಹ ಅನುಕೂಲವಾಗುವುದಲ್ಲದೆ ಸರಕಾರಿ ಜಾಗವನ್ನು ಸ್ವತ್ತು ಮಾಡಿದ್ದರೆ ವಶಕ್ಕೆ ಪಡೆಯಬಹುದು ಎಂದು ಹೇಳಿದರು.

Contact Your\'s Advertisement; 9902492681

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಿಕೆ ಬಿರಾದಾರ್ ಮಾತನಾಡಿ ಈ ಯೋಜನೆಯು ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇಕ್ಷಣಾ ಸಂಸ್ಥೆಗಳ ಸಹಭಾಗಿತ್ವದಲ್ಲಿ 16580 ಗ್ರಾಮಗಳ ಗ್ರಾಮಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ ನಂತರ ಆಸ್ತಿಯ ಹಕ್ಕು ಪತ್ರ ನೀಡುವ ಯೋಜನೆ ಇದಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹಣಮಂತ್ರಾಯ ದೊರೆ ಉದ್ಘಾಟಿಸಿದರು ವೇದಿಕೆಯ ಮೇಲೆ ಹಿರಿಯ ಮುಖಂಡರಾದ ರಾಮಚಂದ್ರಪ್ಪ ಕಾಶಿರಾಜ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here