ಕಲಬುರಗಿ: ಕರ್ನಾಟಕ ಉರ್ದು ಅಕಾಡೆಮಿಗೆ ನೂತನ ಸದಸ್ಯರ ಸಮಿತಿ ರಚನೆಗೆ ಒತ್ತಾಯಿಸಿ ಮುಂದಿನ ಹೋರಾಟದ ರೂಪುರೇಷ ಕುರಿತು ಇಂದು ಶೋಷಿಯಲ್ ಜಾಗೃತಿ ಫೋರಂ ವತಿಯಿಂದ ಪೂರ್ವ ಭಾವಿ ಸಭೆ ನಡೆಯಿತು.
ಈಗಾಲೇ ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದು, ಮನವಿಗೆ ಸರಕಾರ ಸೂಕ್ತ ಸ್ಪಂದಿಸದಿದ್ದರೆ ಮುಂದಿನ ಹೋರಾಟರದ ರೂಪುರೇಷ ಕುರುತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಅಕಾಡೆಮಿ ಸಮಿತಿ ರಚನೆಗೆ ಒತ್ತಾಯಿಸಿ ಸೆಪ್ಟೆಂಬರ್ 17 ರಂದು ಕಲಬುರಗಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸುವುದು, ಮತ್ತು ಪತ್ರಿಕಾಗೋಷ್ಠಿಗಳು, ಸಹಿ ಸಂಗ್ರಹ, ಉಪವಾಸ ಸತ್ಯಾಗ್ರಹ, ಬೈಕ್ ರ್ಯಾಲಿ, ಡೋರ್ ಟೂ ಡೋರ್ ಅಭಿಯಾನ ಸೇರಿದಂತೆ ಹಂತ ಹಂತವಾಗಿ ಹೋರಾಟಗಳು ಕೈಗೊಳುವ ಬಗ್ಗೆ ತೀರ್ಮಾನಿಸಲಾಯಿತು.
ಫೋರಂ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ ಅವರ ನೇತೃತ್ವದಲ್ಲಿ ಸಭೆ ಜರುಗಿತ್ತು, ಸಭೆಯಲ್ಲಿ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಶಕೀಲ್ ಸರಡಗಿ, ಡಾ.ರಫೀಕ್ ಕಮಲಾಪುರಿ, ಡಾ.ಅಬ್ದುಲ್ ಕರೀಮ್, ಬಾಬಾ ಫಕ್ರುದ್ದೀನ್, ಕಲ್ಯಾಣ್ ಕುಮಾರ್ ಸೇರಿದಂತೆ ಮುಂತಾದವರು ಇದ್ದರು.