ಜಿಲ್ಲಾದ್ಯಂತ ಸರಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಹಾಕಲು: ಉದಯ ಪಾಟೀಲ ಆಗ್ರಹ

0
28

ಜೇವರ್ಗಿ: ಮಹಾ ಮಾನವತವಾದಿ, ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು, ಎಲ್ಲಾ ಸರಕಾರಿ ಕಚೇರಿಗಳಲ್ಲಿ ತಪ್ಪದೆ ಹಾಕಬೇಕೆಂದು, ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಿದ್ದ ಸಮಯದಲ್ಲಿ ಆದೇಶ ಹೋರಡಿಸಿದ್ದಾರೆ, ಆದರೆ ಜಿಲ್ಲೆಯ ಕೆಲವು ಸರಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಇಡದೆ, ಸರಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ನಗರ ಘಟಕ ಅಧ್ಯಕ್ಷರಾದ ಉದಯಕುಮಾರ ಪಾಟೀಲ ಹೇಳಿದ್ದಾರೆ.

ಈ ಕುರಿತು ಸುದ್ಧಿಗಾರರಗೊಂದಿಗೆ ಮಾತನಾಡಿದ ಉದಯ ಪಾಟೀಲ ಅವರು, ಬಸವೇಶ್ವರರು ಒಬ್ಬರು ಯಾವುದೇ ಜಾತಿಗೆ ಸೀಮಿತವಾದವರಲ್ಲ, ಎಲ್ಲಾ ಮಹಾತ್ಮರ ಭಾವಚಿತ್ರದ ಜೊತೆಗೆ, ಬಸವೇಶ್ವರ ಭಾವಚಿತ್ರವನ್ನು ಸರಕಾರಿ ಕಚೇರಿಯಲ್ಲಿ ಹಾಕಬೇಕೆಂದು ಸಿದ್ಧರಾಮಯ್ಯನವರು ಆದೇಶ ಹೊರಡಿಸಿದ್ದರು.

Contact Your\'s Advertisement; 9902492681

ಆದರೆ ಇಂದು ಕಲಬುರಗಿಯ ರಜಿಸ್ಟರ್ ಕಚೇರಿಗೆ ನಾನು ಮತ್ತು ನನ್ನ ಮಾರ್ಗದರ್ಶಕರಾದ ಮಹಾಸಭಾದ ಯುವ ಘಟಕ ಜಿಲ್ಲಾ ಗೌರವಾಧ್ಯಕ್ಷರಾದ ಎಮ್.ಎಸ್ ಪಾಟೀಲ ನರಿಬೋಳ ಅವರು ಕಚೇರಿಗೆ ಹೋದ ಸಮಯದಲ್ಲಿ, ಬಸವೇಶ್ವರ ಭಾವಚಿತ್ರ ಇಲ್ಲದಿರುವುದು, ಕಂಡುಬಂದಿದ್ದರಿಂದ, ಸ್ಥಳಿಯ ಅಧಿಕಾರಿಗಳಿಗೆ ವಿಚಾರಿಸಿದಾಗ, ಇಲ್ಲಸಲ್ಲದ ನೆಪಗಳನ್ನು ಹೇಳಿ, ತಕ್ಷಣವೇ ಬಸವೇಶ್ವರರ ಭಾವಚಿತ್ರವನ್ನು ಕಚೇರಿಯಲ್ಲಿ ಹಾಕಿ ಗೌರವ ಸೂಚಿಸಿದ್ದಾರೆ.

ಇನ್ನೂಮುಂದೆ ಹೀಗಾಗ ಕೂಡದ, ತಪ್ಪದೆ ಜಿಲ್ಲಾಧ್ಯಂತ ಎಲ್ಲಾ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಇಡದೆ ಹೋದಲ್ಲಿ, ಮುಂದಿನ ದಿನಗಳಲ್ಲಿ ಆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲು ಅನಿವಾರ್ಯವಾಗುತ್ತದೆ ಎಂದು ವೀರಶೈವ ಮಹಾಸಭಾದ ನಗರ ಘಟಕ ಜಿಲ್ಲಾಧ್ಯಕ್ಷರಾದ ಉದಯ ಪಾಟೀಲ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here