ಕಲಬುರಗಿ: ನಗರದ ಕೋರ್ಟ್ ರಸ್ತೆ ಬಾಲಾಜಿ ಟಿ. ಪಾಯಿಂಟ್ ಹತ್ತಿರ ರಿಪಬ್ಲಿಕನ್ ಯೂತ್ ಫೆಡರೆಷನ್ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಐತಿಹಾಸಿಕ ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ಝಿ ಕನ್ನಡ ವಾಹಿನಿಯ ನಿರ್ದೇಶಕ ರಾಘವೇಂದ್ರ ಹುಣಸೂರ ಅವರಿಗೆ ನೈತಿಕ ಬೆಂಬಲ ಹಾಗೂ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ಜರುಗಿತು.
ಟ್ರಾಫೀಕ್-೧ ಪಿ.ಐ. ರಮೇಶ ಕಾಂಬಳೆ ಹಾಗೂ ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ಅವರು ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ್ ಅವರು ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕುರಿತು ಮಹಾನಾಯಕ ಎಂಬ ಧಾರಾವಾಹಿ ಪ್ರಸಾರ ಮಾಡುತ್ತಿರುವ ಝಿ ಕನ್ನಡ ವಾಹಿನಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಝೀ ಕನ್ನಡ ವಾಹಿನಿ ನಿರ್ದೇಶಕ ರಾಘವೇಂದ್ರ ಹುಣಸೂರ ಅವರಿಗೆ ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಕರೆ ಬರುತ್ತಿದ್ದು, ಅವರು ಕರೆಗಳಿಗೆ ಭಯಭೀತರಾಗದೆ ಧೈರ್ಯದಿಂದ ಮಹಾನಾಯಕ ಧಾರಾವಾಹಿ ಪ್ರಸಾರ ಮಾಡಬೇಕು. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ಝಿ ಕನ್ನಡ ವಾಹಿನಿ ಪ್ರಸಾರಮಾಡುತ್ತಿರುವ ಮಹಾನಾಯಕ ಧಾರವಾಹಿ ಪೋಸ್ಟರ್‌ಗಳನ್ನು ನಗರದ ಪ್ರಮುಖರಸ್ತೆಗಳಲ್ಲಿ ಅಳವಡಿಸಲು ಸಹಾಯಧನ ನೀಡುವುದಾಗಿ ಹೇಳಿದರು.
ದಲಿತ ಹಿರಿಯ ಮುಖಂಡ ಡಾ. ವಿಠಲ ದೊಡ್ಮನಿ, ಮಾಜಿ ಮಹಾಪೌರ ಸೋಮಶೇಖರ ಮೇಲಿನಮನಿ, ರೇಣುಕಾ ಬಾಬುರಾವ್ ಚವ್ಹಾಣ, ಧರ್ಮಣ್ಣಾ ಕೋಣೆಕರ್ ಮಹಾನಾಯಕ ಧಾರಾವಾಹಿ ಕುರಿತು ಮಾತನಾಡಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹನುಮಂತ ಇಟಗಿ ಅವರು ಪ್ರಾಸ್ತಾವಿಕ ಮಾತನಾಡಿದರು, ಸಿದ್ಧಾರ್ಥ ಚಿಂಚನಸೂರ ಅವರು ಸ್ವಾಗತಿಸಿದರು. ಶಿವಕುಮಾರ ಜಾಲವಾದ ವಂದಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಂತೋಷ ಮೇಲ್ಮನಿ, ರತನ ಕನ್ನಡಿಗಾ, ಸತೀಶ ಮಾಲೆ, ಡಾ.ಅನೀಲ್ ಟೆಂಗಳಿ, ಅಂಬರೀಶ್ ಅಂಬಲಗಿ, ರಾಣು ಮುದ್ದನಕರ್, ಅಜಯ ಕೊರಳ್ಳಿ, ಶಿವಾನಂದ ಬುಕ್ಕನ್, ವಿಘ್ನೇಶ್ವರ ಟೈಗರ್, ಶಶಿ ಆಲೂರ್ಕರ್, ಅರುಣಕುಮಾರ ಗಡ್ಡದ, ವಿದ್ಯಾಸಾಗರ ಬಬಲಾದಕರ್, ಚಿದಾನಂದ ಕುಡ್ಡನ್, ಸಿದ್ಧಾರ್ಥ ಪಾರೆ, ರಮೇಶ ಹಾಗರಗಿ, ಮಹೇಶ ನವಲಗಿರಿ, ಮಯೂರ್ ವಾಘಮೋರೆ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.