ಅಚ್ಚಪ್ಪಗೌಡರ ಹೋರಾಟ ಪಠ್ಯ ಪುಸ್ತಕವಾಗಲಿ: ಬಸವರಾಜ ಸಿನ್ನೂರ

0
61

ಶಹಾಪುರ : ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರಾದ ಅಚ್ಚಪಗೌಡ ಸುಬೇದಾರ್ ಹೋರಾಟದ ಪರಿ ಅವರ ಧೈರ್ಯ ಸಾಹಸ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರು ಸರಕಾರಕ್ಕೆ ಒತ್ತಾಯಿಸಿದರು.

ನಗರದ ಹೊರವಲಯದಲ್ಲಿರುವ ಅಚ್ಚಪ್ಪಗೌಡ ಸುಬೇದರ್ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡು ಹೈಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಚ್ಚಪಗೌಡ ಸುಭೇದಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

Contact Your\'s Advertisement; 9902492681

ಅಚ್ಚಪ್ಪಗೌಡ ಸುಭೇದಾರ ಜೀವನಗಾಥೆಯನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಸೇರಿಸುವುದರ ಮುಖಾಂತರ ಇಂದಿನ ಯುವಕರಿಗೆ ಅವರ ಆದರ್ಶ ತತ್ವಗಳನ್ನು ತಿಳಿಪಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕೆಲಸ ನಿರ್ವಹಿಸಬೇಕಾಗಿದೆ ಎಂದರು.

ಗ್ರಾಮೀಣ ಭಾಗದ ಮಹಿಳೆಯರು ಇಂದಿಗೂ ಬೀಸುವಾಗ ಕುಟ್ಟುವಾಗ ಗೌಡರ ಮೇಲೆ ಹಾಡನ್ನು ಕಟ್ಟಿ ಜಾನಪದ ಶೈಲಿಯಲ್ಲಿ ಇಂದಿಗೂ ಹಾಡನ್ನು ಹಾಡುತ್ತಾರೆ ಇದು ಗೌಡರ ಹೋರಾಟದ ಪರಿ ಇಂದಿಗೂ ಜೀವಂತಿಕೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ಸಂದರ್ಭದಲ್ಲಿ ಡಾ: ಚಂದ್ರಶೇಖರ್ ಸುಬೇದಾರ, ಕರಣ್ ಸುಬೇದಾರ್, ಡಾ: ಗಣೇಶ್, ಡಾ: ಸಂತೋಷ್ ಮಲ್ಲಿಕಾರ್ಜುನ ಸಜ್ಜನ್, ಮಲ್ಲಿಕಾರ್ಜುನ ನಾಟೇಕರ್,ಅಮರೇಶ ದೇಸಾಯಿ ಹನುಮಂತ ಶಿರವಾಳ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here