ಕಲಬುರಗಿ: ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯರ ಸಮಿತಿ ರದ್ದಾಗಿ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯ ಕಳೆಯುತ್ತಿದ್ದು, ಅಕಾಡೆಮಿಗೆ ಸಮಿತಿ ಇಲ್ಲದೆ ಅಕಾಡೆಮಿಯ ಭಾಷಾ ಚಟುವಟಿಕೆ ಮತ್ತು ಭಾಷಾ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತು ಹೋಗಿದ್ದು, ತಕ್ಷಣ ಅಕಾಡೆಮಿಗೆ ನೂತನ ಸದಸ್ಯರ ಸಮಿತಿ ರಚಿಸಬೇಕೆಂದು ಇಂದು ಹೈದಾರಾಬಾದ್ ಕರ್ನಾಟಕ ಸೋಶಿಯಲ್ ಜಾಗೃತಿ ಫೋರಂ ವತಿಯಿಂದ ಸಿಎಂಗೆ ಮನವಿ ಸಲ್ಲಿಸಿದರು.
ಇಂದು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭೇಟಿ ನೀಡಿದ ಫೋರಂ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ ಹಾಗೂ ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಕಾರ್ಯದರ್ಶಿ ಶಕೀಲ್ ಸರಡಗಿ ಅವರ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.