ಬೆರಳಚ್ಚುಗಾರರಿಗೆ ಆದೇಶ ಪತ್ರ ನೀಡಿ

0
44

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದಿಂದ 2016 ರಲ್ಲಿ ಅಧಿಸೂಚನೆ ಹೊರಡಿಸಿದ್ದ ಬೆರಳಚ್ಚುಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೀಘ್ರವಾಗಿ ಆದೇಶ ಪತ್ರ ನೀಡಬೇಕೆಂದು ಎಂ.ಬಿ ಅಂಬಲಗಿ ಒತ್ತಾಯಿಸಿದರು.

ಪತ್ರಿಕಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ 2016 ರಲ್ಲಿ ಒಟ್ಟು 661 ಹುದ್ದೆಗಳನ್ನು ಭರ್ತಿಗೆ ಅಧಿಸೂಚನೆ ನೀಡಲಾಗಿತ್ತು. ಅದರಲ್ಲಿ ಇಲ್ಲಿಯ ತನಕ 260ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ, ಸೇರಿದಂತೆ ಹೈದ್ರಾಬಾದ ಕರ್ನಾಟಕ ಭಾಗದ 160 ಹುದ್ದೆಗಳನ್ನು ಇನ್ನೂವರೆಗೂ ಆದೇಶ ಬಂದಿಲ್ಲ. ಈ ಪ್ರಕ್ರಿಯೆಯು 4 ವರ್ಷಗಳೇ ಮುಗಿದರೂ ಪೂರ್ಣಗೊಂಡಿಲ್ಲ, ಹೀಗಾಗಿ ನೇಮಕವಾದ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕ್ರಮವಾಗಿ ನೇಮಕಾತಿ ವಿಧಾನವು ನಿಧಾನಗತಿಯಿಂದ ಸಾಗಿದ್ದರಿಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಹುದ್ದೆಗಳಿಗೆ ಎರಡೆರಡು ಬಾರಿ ದಾಖಲೆ ಪರಿಶೀಲಿಸಿದ್ದು, ಇನ್ನೂವರೆಗೂ ನೇಮಕಾತಿ ಆದೇಶ ಬರದಿರುವುದು ಸಾಕಷ್ಟು ನಿರಾಸೆ ಮೂಡಿಸಿದೆ ಎಂದು ನೇಮಕವಾದ ಅಭ್ಯರ್ಥಿಯೊಬ್ಬರು ತಿಳಿಸಿದರು.

ಈ ಸಂದರ್ಭದಲ್ಲಿ ಸೋಮಶೇಖರ್, ಪ್ರಕಾಶ್, ಶಶಿಕಲಾ, ಅಂಬಿಕಾ, ರಾಜಶೇಖರ್ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here