ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 13ರ ಆಜಾದಪುರ ರಸ್ತೆ ಮನಿಯಾರ್ ಫಂಕ್ಷನ್ ಹಾಲ್, ಉಮರ್ ಕಾಲೋನಿಯ ಬಡಾವಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದ ಪೊಲೀಸ್ ಹಾಗೂ ಪಾಲಿಕೆ ಸಿಬ್ಬಂದಿಗಳ ನೇತೃತ್ವದಲ್ಲಿ ಸುಮಾರು 50-60 ಹಂದಿಗಳನ್ನು ಹಿಡಿದು ಸ್ಥಾಳಂತರಿಸಲಾಯಿತು.
ಈ ಸಂದರ್ಭದಲ್ಲಿ ಎಂಬಿ ನಗರ ಪೊಲೀಸ್ ಠಾಣೆಯ ಎಎಸ್ಐ ಮುತಣ್ಣ, ಸಿದ್ಧಣರೆಡ್ಡಿ, ಬಿರಣ್ಣ, ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ಪಶುವೈದ್ಯಾಧಿಕಾರಿ ಮುಹಮ್ಮದ ಸಖಾವತ್ ಹುಸೇನ್ ತಂಡದವರು ಇದ್ದರು.
ಬಡಾವಣೆಯಲ್ಲಿ ಸುಮಾರು ಹಂದಿಗಳು ತಮ್ಮ ಬಡಾವಣೆಯಲ್ಲಿ ತಂದು ಬಿಡಲಾಗಿದೆ ಎಂದು ತಿಳಿಸಿ ಪಾಲಿಕೆಗೆ ಬಡಾವಣೆಯ ಮುಖಂಡರಾದ ದಸ್ತೇಗಿರ ಅಹ್ಮದ್ ನೇತೃತ್ವದಲ್ಲಿ ನಿವಾಸಿಗಳು ಮನವಿ ಸಲ್ಲಿಸಿದರು.