ಅವಮಾನಗಳ ಜೊತೆಗೆ ಸಾಧನೆಯೂ ಹೊರಬರಲಿ: ನಿಜಲಿಂಗ ದೊಡ್ಮನಿ

0
317

ಜೇವರ್ಗಿ: ಬಾಬಾ ಸಾಹೇಬ ಡಾ.ಅಂಬೇಡ್ಕರ್ ರವರು ಅನುಭವಿಸಿದ ಅವಮಾನಗಳ ಜೊತೆಗೆ ಅವರ ಸಾಧನೆಗಳನ್ನು ಸಹ ಮಹಾನಾಯಕ ಧಾರವಾಹಿಯ ಮೂಲಕ ಜನರಿಗೆ ತಿಳಿಸಬೇಕು ಎಂದು ಸೊನ್ನ ಎಸ್.ಜಿ.ಎಸ್.ವಿ ಪಪೂ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಆಧಾರಿತವಾದ ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಡಾ. ಬಿ ಆರ್ ಅಂಬೇಡ್ಕರ್ ಒಂದು ಜಾತಿ, ಸಮುದಾಯಕ್ಕೆ ಮಾತ್ರ ಸಿಮೀತವಾಗಿಲ್ಲ. ಬಾಬಾ ಸಾಹೇಬರು ದೇಶದ ಆಸ್ತಿ. ಪ್ರತಿಯೊಬ್ಬ ಭಾರತೀಯರು ಬಾಬಾ ಸಾಹೇಬರ ಮುಂದಾಲೋಚನೆಯನ್ನು ಅರಿತುಕೊಳ್ಳಬೇಕು. ದೇಶದ ಮಹಿಳೆಯರು, ಶೋಷಿತರ ಸಲುವಾಗಿ ತಮ್ಮ ಜೀವನವನ್ನೇ ಸವೆಸಿದ್ದಾರೆ. ಇಡೀ ವಿಶ್ವವನ್ನು ಕೊಂಡಾಡುವಂತ ಸಂವಿಧಾನ ರಚಿಸುವುದರ ಮೂಲಕ ಬಾಬಾ ಸಾಹೇಬರು ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ.

ಮಹಾನಾಯಕ ಧಾರವಾಹಿಯಲ್ಲಿ ಬಾಬಾ ಸಾಹೇಬರ ಸಾಧನೆಗಳನ್ನು ಸಹ ಹೊರಬರಬೇಕು. ಇಂತಹ ಮಹಾನ್ ನಾಯಕ ಪಟ್ಟಿರುವ ಶ್ರಮವನ್ನು ಮತ್ತು ಅವಮಾನಗಳು ನಮಗೆ ಪಾಠವಾಗಬೇಕು. ಅವರು ಆದರ್ಶಗಳನ್ನು ಇಂದಿನ ಪೀಳಿಗೆ ಆಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಜೀ ಕನ್ನಡ ವಾಹಿನಿ ಇಡೀ ವಿಶ್ವಕ್ಕೆ ತಿಳಿಸಿದೆ. ಜೀ ಕನ್ನಡ ವಾಹಿನಿಯ ಮುಖ್ಯಸ್ಥರು ರಾಘವೇಂದ್ರ ಹುಣಸೂರ ಹಾಗೂ ಮಹಾನಾಯಕ ಧಾರವಾಹಿ ಸೃಷ್ಟಿಕರ್ತೆ ಪ್ರಣೀತಿ ಸಿಂಧೆ ಅವರು ಶ್ಲಾಘನೀಯ. ಹುಣಸೂರ ಅವರಿಗೆ ಬೆದರಿಕೆ ಕರೆ ಬರುತ್ತಿರುವುದು ಖಂಡನೀಯ. ಬೆದರಿಕೆ ಹಾಕಿದವರ ಮೇಲೆ ಶೀಘ್ರವೇ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ ಮುಖಂಡರಾದ ಶರಣಬಸವ ಕಲ್ಲಾ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ದವಲಪ್ಪ ಮದನ, ಶ್ರೀಮಂತ ಧನ್ನಾಕರ, ಶರಣಪ್ಪ ಹೊಸಮನಿ, ರಾಜಶೇಖರ ಶಿಲ್ಪಿ, ಮಲ್ಲಿಕಾರ್ಜುನ ದಿನ್ನಿ, ದೇವಿಂದ್ರ ವರ್ಮಾ, ಮದರಿ ಗ್ರಾಪಂ ಅಧ್ಯಕ್ಷ ಸಂಗು ಕಟ್ಟಿಸಂಗಾವಿ, ಶಾಂತಪ್ಪ ಯಲಗೋಡ, ಭೀಮಾಶಂಕರ ಹರನಾಳ, ಮಲ್ಲಿಕಾರ್ಜುನ ಕರಕಿಹಳ್ಳಿ, ರವಿಕುಮಾರ ಕುರಳಗೇರಾ, ಶ್ರೀಹರಿ ಕರಕಿಹಳ್ಳಿ, ಗಿರಿಮಲ್ಲಪ್ಪ ನಾಗರೆಡ್ಡಿ, ಶಿವಕುಮಾರ ಜಮಖಂಡಿ, ಮಹೇಶ ಕೋಕಿಲೆ ವರವಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here