ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಇತ್ತೀಚಿನ ತನ್ನ ತಪ್ಪು ನಡೆಗಳಿಂದಾಗಿ ರಾಜ್ಯಾದ್ಯಂತ ಕೆಟ್ಟ ಹೆಸರು ಸಂಪಾದಿಸುತ್ತಿದೆ.
ಕೆಲ ದಿನಗಳ ಹಿಂದೆ ವಿವಿಯ ಪ್ರಮುಖ ವಿಭಾಗಗಳ ಮುಖ್ಯಸ್ಥರು ಹೊಡೆದಾಟದ ಪ್ರಸಂಗದಿಂದ ವಿವಿ ತನ್ನ ಘನತೆಗೆ ಚ್ಯುತಿ ತಂದುಕೊಂಡಿತ್ತು.
ಇದೀಗ ಪದವಿ ಪರೀಕ್ಷೆಗೆ ಸಂಬಂಧಿಸಿದಂತೆ
ಮತ್ತೊಂದು ರಾಮಾಯಣ ಮಾಡಿಕೊಂಡಿರುವುದರಿಂದ ಮತ್ತೆ ಸುದ್ದಿಯಲ್ಲಿದೆ.
ಸದ್ಯ. ಗುಲ್ಬರ್ಗ ಜ್ನಾನಗಂಗಾ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲ ಸಚಿವರ ಆದೇಶ 181 ಪರೀಕ್ಷ ಮೇಲ್ವಿಚಾರಕರ ನೇಮಕಾತಿ ಆದೇಶ ರದ್ದುಗೊಳಿಸಿ ಆದೇಶ ಪರೀಕ್ಷ ಕೇಂದ್ರದ ಪ್ರಾಂಶುಪಾಲರನ್ನೆ ಶಿಸ್ತುಬದ್ದವಾಗಿ ಪರೀಕ್ಷೆ ನಡೆಸಲು ಸೂಚಿಸಿದ ವಿಶ್ವ ವಿದ್ಯಾಲಯ ದಂದ್ವ ನೀತಿ ಅನುಮಾನಕ್ಕೆ ಎಡೆಮಾಡಿದೆ.
ರಾಯಚೂರ ಸೇರಿ 4 ಜಿಲ್ಲೆಗಳ 465 ಕಾಲೇಜುಗಳ ವಿದ್ಯಾರ್ಥಿಗಳು ಪರಿಕ್ಷೆ ಬರೆಯುತ್ತಿದ್ದಾರೆ. ಒಟ್ಟಾರೆ 61,000 ವಿದ್ಯಾರ್ಥಿಗಳು ಪದವಿ ಪರೀಕ್ಷೆ ಬರೆಯುತ್ತಿದ್ದಾರೆ. 181 ಪರೀಕ್ಷ ಕೇಂದ್ರಗಳಿಗೆ ನೇಮಕವಾಗಿದ್ದ ಪರೀಕ್ಷ ಮೇಲ್ವಿಚಾರಕರ ಆದೇಶ ಹಿಂದಕ್ಕೆ ಪಡೆದ ವಿಶ್ವ ವಿದ್ಯಾಲಯ. Sep 14& sep 14 ಕ್ಕೆ ಎರಡೆರಡು ಬಾರಿ ಪರೀಕ್ಷ ಮೇಲ್ವಿಚಾರಕರ ಆಯ್ಕೆ ಪಟ್ಟಿ ರಿಲಿಸ್ ಮಾಡಲಾಗಿತ್ತು.
ಪರಿಕ್ಷ ಮೇಲ್ವಿಚಾರಕರ ನೇಮಕಾತಿಯಲ್ಲಿ ಗೋಲಮಾಲ್ ನಡೆದಿರುವ ಆರೋಪ ಕೇಳಿ ಬಂದಿತ್ತು. ಈದೀಗ ಪರೀಕ್ಷ ಮೇಲ್ವಿಚಾರಕರ ನೇಮಕಾತಿ ಆಯ್ಕೆ ಪಟ್ಟಿಯನ್ನೆ ರದ್ದು ಮಾಡಿ ಆದೇಶಿಸಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಪರೀಕ್ಷ ಮೇಲ್ವಿಚಾರಕರೆ ಇಲ್ಲದೆ ಸ್ನಾತಕ ಪರೀಕ್ಷೆ ನಡೆಸಲು ನಿರ್ಧರಿಸಿರುವ ವಿವಿ ನಡೆ ಸುತ್ತ ಅನುಮಾನದ ಹುತ್ತ ಸೃಷ್ಠಿಯಾಗುತಿದೆ.