ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಂಘಟಿತ ಹೋರಾಟಕ್ಕೆ ಸಿದ್ಧತೆ

0
92

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಂಘಟಿತ ಹೋರಾಟ ರೂಪಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಅಂಜೂಮನ್ ಎ ತರಕ್ಕಿ ಸಭಾಂಗಣದಲ್ಲಿ ಹೈ.ಕ.ಜನಪರ ಸಂಘರ್ಷ ಸಮಿತಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ಲಿಂಗರಾಜ ಸಿರಗಾಪೂರ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು ತಾವು ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದು, ತಮ್ಮ ಬೆಂಬಲಕ್ಕೆ ಸಮಾನ ಮನಸ್ಕರು ಕೈಜೋಡಿಸಿದ್ದಾರೆ.ಸರಕಾರದ ಕಣ್ಣು ತೆರೆಸಲು ಸಂಘಟಿತ ಹೋರಾಟ ಅಗತ್ಯ.371 ಜೆ ಜಾರಿಗೆ ತರಲು ಸಂಘಟಿತ ಹೋರಾಟದಿಂದ ಸಾಧ್ಯವಾಗಿದೆ.ಕಲ್ಯಾಣ ಕರ್ನಾಟಕ ಪ್ರದೇಶದ 6 ಜಿಲ್ಲೆಗಳಲ್ಲಿರುವ ಸಾಹಿತಿಗಳು, ಬುದ್ಧಿ ಜೀವಿಗಳು ಸೇರಿದಂತೆ ಸಾಮಾಜಿಕ ಚಿಂತಕರನ್ನು ಒಗ್ಗೂಡಿಸಿ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಬೇಕಾಗಿದೆ.ಇದು ತಮ್ಮಿಂದ ಮಾತ್ರ ಸಾಧ್ಯ.ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ತಾವು ಸಲ್ಲಿಸಿದ ಮನವಿಯಲ್ಲಿರುವ ಸಲಹೆಗೆ ಸ್ವಾಗತಿಸಿ, ಈಗಾಗಲೇ 6 ಜಿಲ್ಲೆಗಳ ಹಲವಾರು ಸಾಹಿತಿಗಳ,ಚಿಂತಕರ ಜೋತೆ ಸಂಘಟಿತ ಹೋರಾಟ ಕುರಿತು ಚಿಂತನೆ ನಡೆಸಲಾಗಿದೆ.ಆರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಯೂ ಸಭೆಗಳನ್ನು ಶೀಘ್ರದಲ್ಲೇ ನಡೆಸಲಾಗುವುದು.ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಮಾಜೀದ ದಾಗಿ, ಮನೀಷ್ ಜಾಜು,ಬಾಬಾ ಫಕ್ರುದ್ದೀನ್,ಸಾಲೋಮನ ದೀವಾಕರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here