ಕಲಬುರಗಿ: ದಲಿತ ಸಮುದಾಯದ ಬೆಂಬಲ ಬಿಜೆಪಿ ಕಡೆಗೆ ವಾಲುತ್ತಿರುವುದನ್ನು ರಾಜ್ಯಾದ್ಯಂತ ಸಂಘಟನಾ ಪ್ರವಾಸ ಕೈಗೊಂಡಿರುವ ನಾನು ಗಮನಿಸಿದ್ದೆನೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣ್ ಸ್ವಾಮಿ ಹೇಳಿದ್ದಾರೆ.
ಕಲಬುರಗಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಮತ್ತು ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ದಲಿತ ಸಂಘಟನೆಯ ನಾಯಕರನ್ನು ಭೇಟಿ ಮಾಡಿ ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡುತ್ತಿದ್ದೇನೆ, ಬಹುತೇಕರು ಸಕಾರಾತ್ಮಕವಾಗಿ ಸ್ವಂದಿಸುತ್ತಿದ್ದಾರೆ ಎಂದು ನಾರಾಯಣ ಸ್ವಾಮಿ ಹೇಳಿದರು.ವಿರೋಧಿಗಳು ಬಿಜೆಪಿಯನ್ನು ದಲಿತರ ವಿರೋಧಿ ಹಾಗೂ ಮೀಸಲಾತಿ ತೆಗೆದು ಹಾಕುತ್ತಾರೆ ಎಂದು ಸುಳ್ಳಿನ ಕಂತೆ ಕಟ್ಟುತ್ತಿದ್ದು,ಇದನ್ನು ದಲಿತರು ಯಾರು ಕೂಡ ನಂಬಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರಿಗಾಗಿ ವಿಶೇಷ ಯೋಜನೆ ಹಮ್ಮಿಕೊಂಡಿದವೆ,ಇದರ ಸದುಪಯೋಗ ಪಡೆದುಕೊಳ್ಳಬೇಕು ದಲಿತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಲಬುರಗಿ (ಗ್ರಾಮಾಂತರ) ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರು ಜಂಟಿಯಾಗಿ ಮಾತನಾಡಿ, ಬಿಜೆಪಿ ಪಕ್ಷವು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಗ್ರ ಜೀವನ ಹಾಗೂ ಹೋರಾಟದ ಬಗ್ಗೆ ವಿಶ್ವದಾದ್ಯಂತ ಬೆಳಕು ಚೆಲ್ಲುವ ಪ್ರಯತ್ನವಾಗಿ ಅಂಬೇಡ್ಕರ್ ಜೀವನದೋಂದಿಗೆ ಅವಿನಾಭಾವ ಸಂಬಂಧ ಹೊಂದಿರುವ “ಪಂಚ ತೀರ್ಥ” ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.
ನಾಗಪೂರ,ಮುಂಬೈ,ದೆಹಲಿ, ಮೌಹ ಹಾಗೂ ಲಂಡನ್ ನಲ್ಲಿ ಡಾ ಅಂಬೇಡ್ಕರ್ ವಾಸವಿದ್ದ ಮನೆ ಖರೀದಿಸಿ ಇವುಗಳನ್ನು ಅಭಿವೃದ್ಧಿ ಪಡಿಸವ ಕಾರ್ಯ ಬಿಜೆಪಿ ಮಾಡುತ್ತಿದೆ,ಹೀಗಾಗಿ ಬಿಜೆಪಿ ಯಾವತ್ತೂ ದಲಿತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪಾಟೀಲ್ ಹಾಗೂ ಅಷ್ಠಗಿ ಹೇಳಿದರು. ಈ ಸಂದರ್ಭದಲ್ಲಿ ಈಶಪ್ಪ ಹೀರೆಮನಿ, ದಿವಾಕರ್, ನಾಮದೇವ ರಾಠೋಡ ಶಿವರಾಜ, ಲಕ್ಷ್ಮಿ ನಾರಾಯಣ್ ಚಿಮ್ಮನಚೋಡಕರ್, ಸುಖೇಂದ್ರ ತಾವಡೆ,ರವಿಚಂದ್ರ ಕಾಂತಿಕರ್,ರವಿ ಮದನಕರ್, ಅಂಬಾರಾಯ ಚಲಗೇರಿ, ದೇವೇಂದ್ರ ಸಿನ್ನುರ್,ಅವಿನಾಶ್ ಗಾಯಕವಾಡ,ಯಶವಂತರಾಯ್ ಅಷ್ಠಗಿ,ಅನೀಲ ಡೋಂಗರಗಾಂವ ವಿಕಾಸ ನೀಲಾ, ಶಿವಾ ಅಷ್ಠಗಿ ಮಹಾರಾಜ ಅರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.