ವಿಕಲಚೇತನರ ವಿವಿಧ ಬೇಡಿಕೆಗಳ ಈಡೇರಿಸಲು ಶಾಸಕ ರಾಜುಗೌಡಗೆ ಮನವಿ

0
78

ಸುರಪುರ: ಜಿಲ್ಲೆಯಲ್ಲಿನ ಮತ್ತು ತಾಲೂಕಿನಲ್ಲಿಯ ವಿಕಲಚೇತನರ ಹಲವಾರು ಬೇಡಿಕೆಗಳಿದ್ದು ಅವುಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.ಆದ್ದರಿಂದ ತಾವು ವಿಕಲಚೇತನರ ಬೇಡಿಕೆಗಳನ್ನು ಪೂರೈಸಲು ಅಧಿಕಾರಿಗಳಿಗೆ ಆದೇಶ ಮಾಡುವಂತೆ ವಿಕಲಚೇತನರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಂಗನಗೌಡ ಧನರಡ್ಡಿ ತಿಳಿಸಿದರು.

ಶಾಸಕ ನರಸಿಂಹ ನಾಯಕ ಅವರನ್ನು ಭೇಟಿ ಮಾಡಿದ ಅನೇಕ ಜನ ವಿಕಲಚೇತನರ ಪರವಾಗಿ ಮಾತನಾಡಿ,ಪ್ರತಿ ಗ್ರಾಮ ಪಂಚಾಯತಿಯ ಅನುದಾನದಲ್ಲಿ ಪ್ರತಿಶತ 5% ರಷ್ಟು ಅನುದಾನ ವಿಕಲಚೇತನರ ಅಭೀವೃಧ್ಧಿಗೆ ಮೀಸಲಿಡುವಂತೆ ಆದೇಶವಿದೆ.ಆದರೆ ಅನುದಾನವನ್ನು ಅನೇಕ ಗ್ರಾಮ ಪಂಚಾಯತಿಗಳಲ್ಲಿ ಖರ್ಚು ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ.

Contact Your\'s Advertisement; 9902492681

ಇನ್ನು ಕೋವಿಡ್-19 ಕಾರಣದಿಂದ ಅನೇಕ ಜನ ವಿಕಲಚೇತನರಿಗೆ 6 ತಿಂಗಳಿಂದ ಮಾಶಾಸನ ನೀಡುವಲ್ಲಿ ವ್ಯತ್ಯಯ ಮಾಡಲಾಗುತ್ತಿದೆ.ವಿಕಲಚೇತನರ ಖಾತೆಗೆ ಮಾಶಾಸನ ಜಮಾ ಮಾಡಿಸಬೇಕು.ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿಕಲಚೇತನರ ಕುಂದು ಕೊರತೆ ಸಭೆ ನಡೆಸುವಂತೆ ಆದೇಶವಿದ್ದರು ಸಭೆಗಳನ್ನು ನಡೆಸುತ್ತಿಲ್ಲ,ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು.ಬಸ್ ನಿಲ್ದಾಣಗಳಲ್ಲಿ ವಿಕಲಚೇತನರ ಸ್ನೇಹಿ ಶೌಚಾಲಯ ನಿರ್ಮಿಸಬೇಕು.ಹುಣಸಗಿ ಮತ್ತು ಸುರಪುರದಲ್ಲಿ ವಿಕಲಚೇತನರ ಭವನ ನಿರ್ಮಾಣ ಮಾಡಬೇಕು.ಎಲ್ಲಾ ವಸತಿ ಯೋಜನೆಗಳಲ್ಲಿ ವಿಕಲಚೇತನರಿಗೆ ಪ್ರತಿಶತ 5% ರಷ್ಟು ಮನೆಗಳನ್ನು ಮೀಸಲಿಡಬೇಕು.ವಿಕಲಚೇತನರ ಗುರುತಿನ ಚೀಟಿಯನ್ನು ಹುಣಸಗಿ ಆಸ್ಪತ್ರೆಯಲ್ಲಿಯೂ ದೊರೆಯಲು ಕ್ರಮ ಕೈಗೊಳ್ಳಬೇಕು ಹಾಗು ಎಲ್ಲಾ ಇಲಾಖೆಯಲ್ಲಿ ವಿಕಲಚೇತನರಿಗಾಗಿ ಪ್ರತಿಶತ 5% ರಷ್ಟು ಅನುದಾನವಿದ್ದು ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಂತರ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಶಾಸಕರು ಎಲ್ಲಾ ಬೇಡಿಕೆಗಳ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿಕಲಚೇತನರಾದ ಕುಮಾರಸ್ವಾಮಿ ರಾಠೋಡ ರೇಣುಕಾ ಪೌಜದಾರ ಶರಣಮ್ಮ ದೊಡ್ಮನಿ ಜಯಶ್ರೀ ಬಡಿಗೇರ ಗುರು ಗುತ್ತೇದಾರ ಬಸವರಾಜ ಸಂಧೀಮನಿ ಬಲಭೀಮ ಹುಣಸಗಿ ಮಮತಾ ಬೇಗಂ ಕಲ್ಲದೇವನಹಳ್ಳಿ ಮೈಬೂಬ ಕೊಡೆಕಲ್ ಯಂಕಪ್ಪ ದಾಸರ್ ಪೀರಪ್ಪ ಕೊಡೇಕಲ್ ಗದ್ದೆಪ್ಪ ಬರದೇವನಾಳ ರಾಜೇಸಾಬ್ ಚೆನ್ನೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here