ಸುರಪುರ: ನಗರದ ರಂಗಂಪೇಟೆಯ ಹಸನಾಪುರದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕಥಾ ಹಂದರದ ಮಹಾನಾಯಕ ಧಾರಾವಾಹಿಗೆ ಬೆಂಬಲಿಸಿ ಬ್ಯಾನರ್ ಹಾಕುವ ಜೊತೆಗೆ ಅಂಬೇಡ್ಕರ ಹಬ್ಬ ಎಂದು ವಿಶೇಷ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಇಂದು ನಾವ್ಯಾರು ಬಾಬಾ ಸಾಹೇಬ್ ಅಂಬೇಡ್ಕರರನ್ನು ಅವರ ಬದುಕಿನಲ್ಲಿಯ ಕಷ್ಟ ಕಾರ್ಪಣ್ಯಗಳನ್ನು ಮಹಾನಾಯಕ ಧಾರಾವಾಹಿಯ ಮೂಲಕ ನೋಡುವಂತೆ ಮಾಡಿದ ಪ್ರಣತಿ ಸಿಂಧೆ ಹಾಗು ಝೀ ಕನ್ನಡ ವಾಹಿನಿ ಮತ್ತು ರಾಘವೇಂದ್ರ ಹುಣಸೂರವರಿಗೆ ಅಭಿನಂಧನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ನಾವೆಲ್ಲರು ಕೇವಲ ಮನರಂಜನೆಗಾಗಿ ಮಹಾನಾಯಕ ಧಾರಾವಾಹಿಯನ್ನು ನೋಡದೆ ಅಂಬೇಡ್ಕರರು ನಮಗಾಗಿ ಪಟ್ಟ ಕಷ್ಟವನ್ನು ಅರಿತುಕೊಂಡು ಅವರು ಕೊಟ್ಟ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಧಾರಾವಾಹಿ ನಿರ್ಮಿಸಿದವರ ಶ್ರಮ ಸಾರ್ಥಕ ಮತ್ತು ನಾವು ಅಂಬೇಡ್ಕರರ ಅನುಯಾಯಿಗಳಾಗಲು ಸಾಧ್ಯವಿದೆ.ಎಲ್ಲರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮತ್ತು ಮಕ್ಕಳಿಗೆ ಸಂವಿಧಾನವನ್ನು ತಿಳಿಸಬೇಕೆಂದು ಕರೆ ನೀಡಿದರು.ಅಲ್ಲದೆ ಕೆಲವರು ಮಹಾನಾಯಕ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ರಾಘವೇಂದ್ರ ಹುಣಸೂರರಿಗೆ ಬೆದರಿಕೆ ಹಾಕುತ್ತಿರುವುದದಾಗಿ ಹೇಳಲಾಗುತ್ತದೆ.ಆದರೆ ಭೀಮ ಬಂಧುಗಳು ರಕ್ತ ಚೆಲ್ಲಿ ಹುಣಸೂರರಿಗೆ ಬೆಂಬಲಕ್ಕೆ ನಿಲ್ಲುವ ಮೂಲಕ ಧಾರಾವಾಹಿ ಪ್ರಸಾರಕ್ಕೆ ಬೆಂಬಲಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ:ಬಿ.ಆರ್.ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಭೀಮ ಧ್ವಜಾರೋಹಣ ನೆರವೇರಿಸಿ ನಂತರ ಮಹಾನಾಯಕ ಬ್ಯಾನರ್ ಅನಾವರಣಗೊಳಿಸಲಾಯಿತು.ಬ್ಯಾನರ್ ಅನಾವರಣಗೊಳಿಸುತ್ತಿದ್ದಂತೆ ನೆರೆದಿದ್ದು ಸಾವಿರಾರು ಜನರು ಅಂಬೇಡ್ಕರರ ಕುರಿತು ಜಯಘೋಷ ಮೊಳಗಿಸುವ ಜೊತೆಗೆ ಬಾಣ ಬಿರುಸುಗಳ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ ಮಲ್ಲಿಕಾರ್ಜುನ ಬಿಲ್ಲವ್ ನ್ಯಾಯವಾದಿ ಆದಪ್ಪ ಹೊಸ್ಮನಿ ಮಲ್ಕಪ್ಪ ತೇಲ್ಕರ್ ಮಾಳಪ್ಪ ಕಿರದಳ್ಳಿ ಭೀಮರಾಯ ಸಿಂಧಗೇರಿ ರಾಹುಲ್ ಹುಲಿಮನಿ ರಮೇಶ ಅರಕೇರಿ ಶ್ರೀಮಂತ ಚಲುವಾದಿ ಶರಣು ಹಸನಾಪುರ ಮಹೇಶ ಶಿವಲಿಂಗ ಹಸನಾಪುರ ಹೊನ್ನಪ್ಪ ತಳವಾರ ಮಹ್ಮದ ಗೌಸ್ ಮಾನಪ್ಪ ಚಲುವಾದಿ ಶಿವಪ್ಪ ಉಲ್ಪೇನರ್ ಸಂತೋಷ ಉಲ್ಪೆನರ್ ಮಾನಪ್ಪ ಉಲ್ಪೇನರ್ ತಿಪ್ಪಣ್ಣ ಕೊಂಗಂಡಿ ಹಣಮಂತ ತೇಲ್ಕರ್ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.