ಚಿಂಚೋಳಿ: ತಾಲೂಕಿನ ರಾಯಕೋಡ್ ಗ್ರಾಮ ದಲ್ಲಿ ಧಾರಾಕಾರ ಮಳೆ ಸುರಿದರಿಂದ ಮನೆಗಳಲ್ಲಿ ನೀರು ಹುಕ್ಕಿ, ಶರಣಪ್ಪ ಪೂಜಾರಿ, ನಾಗಪ್ಪ ಪೂಜಾರಿ ಮತ್ತು ಶಂಕ್ರಪ್ಪ ಪೂಜಾರಿ ಅವರ ತಲಾ 8,5,8 ಕುರಿಗಳು ಸತ್ತುಹೋಗಿವೆ.
ಘಟನೆಯ ಕುರಿತು ಮಾಹಿತಿ ಪಡೆದ ಮಾಜಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಅವರು ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಅದ ನಷ್ಟಕ್ಕೆ ಪರಿಹಾರ ಸಿಗುವನಂತೆ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿ, ಮೃತಪಟ್ಟಿರುವ ಕುರಿಗಳ ಮಾಲಿಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುರೇಶ್ ಪಾಟೀಲ್ ,ಗ್ರಾಮ ಪಂಚಯತ್ ಅಧ್ಯಕ್ಷರಾದ ಜಗುಸ್ವಾಮಿ ಭೂತಪೋರ್, ಚಂದ್ರು ಮೇಲ್ವರ್, ವಿಜಯೇಕುಮಾರ್ ಬಿರಾದಾರ್, ಶರಣು ಭೂಷಟ್ಟಿ, ನವೀನ್ ಗುತ್ತೆದಾರ್ ಅನ್ವರ್ಪಶ, ಆಸೀಫ್ ಅಲಿ ರಾಯಕೋಡ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.