ನಾಗಮಂಗಲ: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಶಿಬಿರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಚಾರಿ ಪೌಷ್ಟಿಕಾಂಶ ರಥಕ್ಕೆ ಪ್ರಾಂಶುಪಾಲರಾದ ಡಾ: ಶಿವರಾಮು, ರವರು ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ತಮ್ಮ ಮನೆಗಳಿಗೆ ಬೇಕಾದ ಸೊಪ್ಪು ತರಕಾರಿ ಹಣ್ಣುಗಳನ್ನು ಜನರೇ ಬೆಳೆದು ಕೊಳ್ಳುತ್ತಿದ್ದರು ಹಿಂದೂ ಕೊಂಡುಕೊಳ್ಳುವ ಪ್ರವೃತ್ತಿ ಎಲ್ಲಾ ಕಡೆ ಕಂಡುಬರುತ್ತಿರುವುದು ವಿಷಾದನೀಯ ಎಂದು ತಿಳಿಸಿದರು. ಅಕ್ಟೋಬರ್ ತಿಂಗಳಿನಿಂದ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತಿದೆ ಈ ಸಮಯದಲ್ಲಿ ಕೂರೊನ್ ವೈರಸ್ ನಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ನಿಜಕ್ಕೂ ಒಂದು ಸವಾಲಾಗಿದೆ. ಅಪೌಷ್ಟಿಕತೆ ಹಿಂದಿನಿಂದಲೂ ಇರುವ ಒಂದು ಆರೋಗ್ಯ ಸಮಸ್ಯೆ ಮುಖ್ಯವಾಗಿ ಮಕ್ಕಳು ಗರ್ಭಿಣಿ ಹಾಗೂ ಬಾಣತಿ ಯರಲ್ಲಿ ಅಪೌಷ್ಟಿಕತೆ ಬರೆದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ವಿಭಾಗದ ಮೇಲ್ವಿಚಾರಕಿ ದಿವ್ಯ, ರವರು ಅಪೌಷ್ಟಿಕತೆ ತಡೆಗಟ್ಟುವಲ್ಲಿ ನಮ್ಮ ಇಲಾಖೆಯ ಜೊತೆಗೆ ಕೈಜೋಡಿಸಿದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಮುದಾಯದ ವೈದ್ಯಕೀಯ ವಿಭಾಗದವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಬಸವರಾಜ್.ಎಂ.ಇಂಗಳಗೇರಿ, ಡಾ.ಶಶಿಕಾಂತ್, ಡಾ.ವಸಂತ್ ಕುಮಾರ್, ಡಾ.ಎಂ.ಶಶಿಕಿರಣ್, ಡಾ.ಶೀತಲ್ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.