ಜೇವರ್ಗಿ: ಈ ಬಾರಿ ಎಸೆಸೆಲ್ಸಿ ಪೂರಕ ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು ಅತ್ಯಂತ ಕಡಿಮೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.
ಜೇವರ್ಗಿ ಪಟ್ಟಣದಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳು ಮಾಸ್ಕ್ ಧರಿಸಬೇಕುವುದು ಕಡ್ಡಾಯವಾಗಿ ಥರ್ಮಸ್ ಪರೀಕ್ಷೆಗೆ ಒಳಪಡಿಸಬೇಕೆಂದು ಮುನ್ನೆಚ್ಚರಿಕೆ ಕ್ರಮವನ್ವನು ಕೈಗೊಳ್ಳಲಾಗಿದ .
ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಪರೀಕ್ಷಾ ಕೇಂದ್ರದಲ್ಲಿ ಇಂದು ಕನ್ನಡ ವಿಷಯದಲ್ಲಿ 46 ಮಕ್ಕಳು ಪರೀಕ್ಷೆಯನ್ನು ಎದುರಿಸಿದರು.
ಎಸ್ಟಿ ಬಿರಾದಾರ್ ಪರೀಕ್ಷಾ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ದೈಹಿಕ ಶಿಕ್ಷಕರ ಮಹಾಂತೇಶ್, ಶಿವಕುಮಾರ್ ನರೋಣಿ, ಸೇರಿದಂತೆ ವೈದ್ಯಕೀಯ ಆರೋಗ್ಯ ಸಹಾಯಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಪರೀಕ್ಷೆ ಸುಸೂತ್ರವಾಗಿ ನಡೆಸಿಕೊಡುತ್ತಿದ್ದಾರೆ.